ಖಾಸಗಿರಣಮತ್ತು ಅಭಿವೃದ್ದಿ

ಗಣೇಶ್ ಭಟ್ ಶಿರಸಿ

ಖಾಸಗೀಕರಣವೇ ಅಭಿವೃದ್ಧಿಯ ದಾರಿಯೆಂದು ತಪ್ಪಾಗಿ ನಂಬಿರುವ ಕೇಂದ್ರ ಸರ್ಕಾರವು, ಹಲವಾರು ರೇಲ್ವೇ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿದೆ.ಈ ನೀತಿಯ ಪ್ರಕಾರ ಖಾಸಗಿ ನಿರ್ವಹಣಾಕಾರರು ತಮ್ಮದೇ ಬಂಡವಾಳ ತೊಡಗಿಸಿ ಹೊಸ ಎಂಜಿನ್ ಮತ್ತು ಭೋಗಿಗಳನ್ನು ಖರೀಧಿಸಿ ನಿಗದಿತ ಮಾರ್ಗಗಳಲ್ಲಿ ರೈಲು ಓಡಿಸಬೇಕು. ಪ್ರಯಾಣ ದರವನ್ನು ನಿಗದಿ ಪಡಿಸುವ ಅಧಿಕಾರವನ್ನು ನಿರ್ವಹಣಕಾರರಿಗೇ ಬಿಡಲಾಗಿದೆ. ಅವರ ಒಟ್ಟೂ ಗಳಿಕೆಯಲ್ಲಿ ಶೇಖಡವಾರು ಪಾಲನ್ನು ರೇಲ್ವೆ ಇಲಾಖೆಗೆ ನೀಡಬೇಕಿದೆ.
ಈ ವಿಧದ ಖಾಸಗೀಕರಣದಿಂದ ರೇಲ್ವೇ ಪ್ರಯಾಣ ದರದಲ್ಲಿ ಹೆಚ್ಚಳವಾಗುವದೆಂಬ ಜನಸಾಮಾನ್ಯರ ಆತಂಕಕ್ಕೆ , ಆ ರೀತಿಯಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಖಾಸಗಿಯವರಿಗೆ ಈಗ ಕೊಡಮಾಡಿರುವ ೧೫೦ ರೇಲ್ವೇ ಮಾರ್ಗಗಳು ಪ್ರಯಾಣಿಕರ ದಟ್ಟಣೆಯಿಂದ ರೈಲ್ವೇ ಇಲಾಖೆಗೆ ಲಾಭ ತಂದುಕೊಡುತ್ತಿರುವವು. ಆದರೂ ಖಾಸಗಿರಂಗದ ಲಾಭದ ದಾಹಕ್ಕೆ ಮಣಿದು, ನಷ್ಟಕಾರಕ ಮಾರ್ಗಗಳನ್ನು ಸರ್ಕಾರವಿಟ್ಟುಕೊಂಡು, ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ.


ಈ ಕ್ರಮದಿಂದಾಗಿ ಖಾಸಗಿ ರಂಗದವರಿಂದ ಸುಮಾರು 30 ಸಾವಿರ ಕೋಟಿ ರೂಗಳ ಹೂಡಿಕೆಯಾಗಲಿದೆಯೆಂದು ರೈಲ್ವೇ ಮಂತ್ರಿ ಹೇಳಿಕೊಂಡಿದ್ದಾರೆ. ರೇಲ್ವೇ ಇಲಾಖೆಗೆ ಈ ಮೊತ್ತದ ಹೂಡಿಕೆ ಜುಜುಬಿ ಎಂಬುದು ವಾಸ್ತವ. ಖಾಸಗಿಕರಣವನ್ನೇ ಪ್ರತಿಪಾದಿಸುವ ಕೇಂದ್ರಸರ್ಕಾರದ ಜನವಿರೋಧಿ ನಿಲುವಿಗೆ ಇದು ಇನ್ನೊಂದು ಉದಾಹರಣೆ.
ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ ನಿರ್ವಹಣೆಯ ಹೊಣೆಗಾರಿಕೆ ತಾತ್ವಿಕವಾಗಿ ಕೇಂದ್ರಸರ್ಕಾರದ್ದು. ಈ ಜವಾಬ್ದಾರಿಯನ್ನು ಕೇಂದ್ರಸರ್ಕಾರಕ್ಕೆ ನಿರ್ವಹಿಸುವ ಸಾಮರ್ಥ್ಯವಿಲ್ಲದಿದ್ದರೆ ಆಸಕ್ತ ರಾಜ್ಯಗಳಿಗೆ ಅವಕಾಶ ನೀಡಬೇಕಾದುದು ಸರಿಯಾದ ದಾರಿ.

ಈ ಕ್ರಮ ರೇಲ್ವೇ ಖಾಸಗಿಕರಣವಲ್ಲ, ಕೆಲವು ಮಾರ್ಗಗಳನ್ನು ಮಾತ್ರ ಖಾಸಗಿಯವರಿಗೆ ಕೊಡುತ್ತಿದ್ದೇವೆ ಎನ್ನುವ ಕೇಂದ್ರದ ಸಮಜಾಯಿಷಿ ‘ಲಾಭದ ಖಾಸಗೀಕರಣ, ನಷ್ಟದ ಸಾಮಾಜಿಕರಣ’ ನೀತಿಗೆ ತಾಜಾ ಉದಾಹರಣೆ.
*************8

One thought on “ಖಾಸಗಿರಣಮತ್ತು ಅಭಿವೃದ್ದಿ

  1. ಖಾಸಗೀಕರಣದ ಭೂತ ಎಲ್ಲ ಕ್ಷೆತ್ರಗಳನ್ನು ವ್ಯಾಪಿಸುತ್ತಿರುವುದು ದೊಡ್ಡ ದುರಂತ ಲೇಖನ ಆಳುವವರ ಕಣ್ಣು ತೆರೆಸಲಿ

Leave a Reply

Back To Top