ಕಾವ್ಯ ಸಂಗಾತಿ
ಆಸೀಫಾ
ಗಜಲ್


ಗಿರೀಶ್ ಜಕಾಪೂರಿ ರವರ ಸಾನಿ ಮಿಸ್ರ
ಈಗ ನಿನ್ನ ಊರುಕೇರಿ ನಿವಾಸ ವಿಳಾಸ ಯಾವುದೂ ನೆನಪಿಲ್ಲ
ನಿನ್ನೊಡನೆ ಆಡಿದ ಒಲವ ಮಾತುಗಳ ಹೊರತು ಬೇರೇನೂ ನೆನಪಿಲ್ಲ
ನಿಟ್ಟುಸಿರು ಬಿಡುತಿದೆ ಜಗವಿಂದು ಮಾನವೀಯತೆಯ ಹುಡುಕಿ ಹುಡುಕಿ
ಸತ್ಯ ಸುಳಿದಾಡಿ ಹೋದ ಯಾವ ಹಾದಿ ಬೀದಿಯೂ ನೆನಪಿಲ್ಲ
ಬಾಯಾರಿ ಬಂದಾಗ ನಿನ್ನೊಲವಿನ ಹನಿಗಳಲ್ಲಿ ತೃಷೆ ಕಳೆಯಿತು
ನಿನ್ನೆದೆಯ ಬಡಿತ ಒಂದಿರಲು ಬೇರೆ ಯಾವ ಶಬ್ದವೂ ನೆನಪಿಲ್ಲ
ತಬ್ಬಿದ ತನುವಿನೊಳು ನಾ ಕರಗಿ ನೀರಾಗಿ ಹರಿದಿರುವೆ
ಮಂಜಿನಂತೆ ಹಗಲು ಹೆಗಲೇರಿದರೂ ಮಾಸದ ಬಿಸುಪಿನ ಹೊರತೇನೂ ನೆನಪಿಲ್ಲ
ಹೊಸ ಮೊಗ್ಗಿ ನಂದದಿ ಅರಳುವ ಉನ್ಮಾದ ಉಲ್ಲಾಸ ಉಕ್ಕುತಿದೆ ಆಸೀ
ಮುಂಗುರುಳ ಸವರಿ ಹಣೆಯ ಚುಂಬಿಸಿದಾಗ ಈ ಜಗವೂ ನೆನಪಿಲ್ಲ
——————————————————————————–
ಆಸೀಫಾ




ಮನಮುಟ್ಟುವಂತಹ ಗಜಲ್