ಗಜಲ್ ಸಂಗಾತಿ
ವಾಣಿ ಯಡಹಳ್ಳಿ ಮಠ
“ಗಜಲ್ (ಸಂಪೂರ್ಣ ಮತ್ಲ )”

ನಾ ಕೈ ಚಾಚಿ ಕರೆಯದಿದ್ದರೂ ಬಳಿಗೆ ಬಂದ
ಬಾಯೆಂದೆ
ನಿನ್ನೊಂದಿಗೆ ಮಾತಾಡುತಿರೇ ಚೆಂದವೆಂದ
ಮಾತಾಡುವೆನೆಂದೆ
ನೀನೆಂದರೇ ಬಲು ವಿಶೇಷವೆಂದ
ಒಪ್ಪುವೆನೆಂದೆ
ನೀ ನನ್ನ ಮೊದಲ ಪ್ರೇಮವೆಂದ
ತಲೆದೂಗುವೆನೆಂದೆ
ನಿನ್ನಲಿ ತಾಯಿ, ತಂಗಿ , ಗೆಳತಿ ಕಾಣುವೆನೆಂದ
ಪುಳಕಗೊಂಡೆನೆಂದೆ
ನೀ ಹುಣ್ಣಿಮೆಯ ಬೆಳದಿಂಗಳೆಂದ
ಬೆರಗಾದೆನೆಂದೆ
ಮಾತಾಡಲು ಸ್ವಲ್ಪವೂ ಮನಸಿಲ್ಲವೆಂದ
ಮೌನವಾಗುವೆನೆಂದೆ
ದಿನವೂ ಮಾತಾಡಲೇನುಳಿದಿಲ್ಲವೆಂದ
ಆಯಿತೆಂದೆ
ಸಾಗಬೇಕಿದೆ ಮುಂದೆ ದೂರಾಗುವೆನೆಂದ
ಸರಿಯೆಂದೆ
ವಾಣಿಗಾಗಿ ತುಸುವೂ ಸಮಯವಿಲ್ಲವೆಂದ
ಅರ್ಥವಾಯಿತೆಂದೆ
ವಾಣಿ ಯಡಹಳ್ಳಿಮಠ





Beautiful
Thank you