ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್


ನನ್ನಂತರಂಗದಿಂದ ವಲಸೆ ಹೋದವನು ಮರಳಿ ಬರಲೇ ಇಲ್ಲ
ಕಾಲ ದೂಡಿ ಹೋಯಿತು ಕೊನೆಗವನು ಮರಳಿ ಬರಲೇ ಇಲ್ಲ
ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ನೀನೆನ್ನ ಉಸಿರೆಂದು ಮರುಗಿದವನು ಮರಳಿ ಬರಲೇ ಇಲ್ಲ
ಆಕಾಶದ ನಭೊ ಮಂಡಲವೇ ಸುತ್ತುತ್ತಿವೆ ಅವನ ಸುತ್ತಲೂ
ಅದೇಕೋ ಒಂಟಿಯಾಗಿ ಉಳಿದವನು ಮರಳಿ ಬರಲೇ ಇಲ್ಲ
ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ
ತನ್ನ ಎದುರಿನ ಕನ್ನಡಿಯಲ್ಲಿ ಅವನನ್ನೆ ತಾನು ಕಂಡವಳು
ಮಿಂಚಿನಂತೆ ಮಾಯವಾದವನು ಮರಳಿ ಬರಲೇ ಇಲ್ಲ
ಮಾಜಾನ್ ಮಸ್ಕಿ




ಮರಳಿ ಹೋದವನ ನೆನಪು ಮರಳಿ ಬರಲೇ ಇಲ್ಲ
Congrats ಮಸ್ಕಿ ಮ್ಯಾಮ್ ಚೆಂದ ಕವನಸಿದ್ದೀರ