ಕಾವ್ಯಸಂಗಾತಿ
ರತ್ನಾ ನಾಗರಾಜ್
ಮನಸು

ಮನಸು
ಮನಸೆ ನೀನೇಕೆ? ಕಲ್ಲಾಗಿ ಹೋದೆ ?
ಓ ಮನಸೆ, ನೀನೇಕೆ ಕಲ್ಲಾಗಿ ಹೋದೆ ? -ಪಲ್ಲವಿ
ನಿನಗಾಗಿ ಮಿಡಿಯದ ಮನಸಿಗೆ
ಮನ ಸೋತೆಯಲ್ಲೇ
ಮಿಡಿದ ಮನಸಿಗೆ ಸ್ಪಂದಿಸಲಾರದೆಯಲ್ಲೇ- ಮನಸೇ
ಬರಡಾದ ಬಾಳಿಗೆ
ಪ್ರೀತಿ ಬಿತ್ತಲು ಹೋಗಿ
ನಿನ್ನ ಬದುಕು ಬತ್ತಿ ಹೋಯಿತಲ್ಲೇ -ಮನಸೇ
ಒಡಲುರಿಯ ಆರಿಸಲಾಗದೆ
ಒಲೆ ಉರಿಯಲ್ಲಿ ಕೈ ಸುಟ್ಟಿಕೊಂಡು
ತಣ್ಣಗಿನ ಸ್ಪ಼ರ್ಶಕ್ಕೆ ಕಾಯದೆಯಲ್ಲೆ -ಮನಸೇ
ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ -ಮನಸೇ
ಯೌವನದ ಸುಳಿಯಲ್ಲಿ
ನಿನ್ನ ಮನಸು ನಿಲ್ಲಲಾರದೆ ನರ್ತಿಸಿತ್ತಲ್ಲೇ
ಕುಣಿಯಲಾರದವರ ಎದರು ಡೊಂಕಾಗಿ ಹೋದೆಯಲ್ಲೇ -ಮನಸೇ
ಸಖನು ನಿನ್ನವನೆಂದು
ಸುಖವು ನಿನ್ನದೆಯೆಂದು ಬಿಗಿದೆಯೆಲ್ಲೇ
ಆ ಸುಖವು ಪಡೆದವರ ಸೊತ್ತೆ ಹೊರತು ಕಾಯಲಾರದಲ್ಲೇ -ಮನಸೇ
ಆ ಮನಸು ನಿನ್ನೆದೆಯ ಹತ್ತಿರವೆಂದೆ
ಆದರೆÀ ಅದು ನಿನ್ನಲ್ಲಿ ಉಳಿಯಲಾರನೆಂದು
ದೂರ ದೂರ ಹೋಯಿತಲ್ಲೇ –ಮನಸೇ
ನಿನ್ನ ಬಾಳ ಬಳ್ಳಿಗಳು ಅರಳಿದವೆಂದು
ಹೂವುಗಳನ್ನು ಮುಡಿಯೇರಿಸಲು ಹೋಗಿ
ಮುಳ್ಳುಗಳ ಕಾವಲನ್ನು ಮರೆತೆಯಲ್ಲೇ -ಮನಸೇ
ನಿನ್ನ ಬದುಕಿನಲ್ಲಿ ಕೆಂಬಣ್ಣದ ಓಕುಳಿ ಚೆಲ್ಲಲು ಹೋಗಿ
ನಿನ್ನ ಕೈಗಳ ರಂಗಿನ ಚಿತ್ತಾರ ನಿಲ್ಲಲಾರದೆ
ನಿನ್ನ ಕಣ್ಣಿನಲ್ಲಿ ನೆತ್ತರು ಬಂತಲ್ಲೇ -ಮನಸೇ
ನೀನು ನಂಬಿದ ಪ್ರೀತಿ
ಮಾಗುವ ಮುನ್ನ, ಕಸುಪಾಗಿ ಉದುರಿ ಹೋಯಿತಲ್ಲೇ —ಮನಸೇ
ಪ್ರೀತಿ ಪ್ರೇಮ ಮಾಯಮೃಗವಲ್ಲವೇನೆ.





ಬಹಳಾ ಚನ್ನಾಗಿದೆ ಅಭಿನಂದನೆಗಳು ಮೇಡಮ್
ಧನ್ಯವಾದಗಳು
Very Nice.madum
Savita Deshmukh
ಧನ್ಯವಾದಗಳು
Very nice