ಕಾವ್ಯ ಸಂಗಾತಿ
ಭಾರತಿ ಅಶೋಕ್
“ಅವಳ ನಿರೀಕ್ಷೆ”

ಅವನ ಬೇಸೆರದ ನಡವಳಿಕೆಯಿಂದ
ಅವಳು ಅವನನ್ನು ನಿರ್ಲಕ್ಷಿಸಿದರೆ
ಅದು ಅವಳ ತಪ್ಪಲ್ಲ
ಅವನು ಸದಾ ತನ್ನನ್ನು ಗಮನಿಸುತ್ತಿರಲಿ ಎನ್ನುವ
ಅವಳ ನಿರೀಕ್ಷೆಯು ತಪ್ಪಲ್ಲ,
ತಪ್ಪು ಅವನದು ಅಲ್ಲ ಬದಲಾಗಿ ಸಂದರ್ಭಗಳು ಯಾವಾಗಲು ಅವಳನ್ನು ನೋಯಿಸುತ್ತವೆ
ಅವನು
ಸದಾ ಅವಳ ಗುಂಗಿನಲ್ಲಿದ್ದರೂ
ಒತ್ತಡದಲ್ಲಿ ಅವಳನ್ನು ಔಪಚಾರಿಕವಾಗಿ ಗಮನಿಸಲಾಗದ
ಸಂಕಟ ಅವನಿಗಿದೆ
ವಾಸ್ತವವೆಂದರೆ ಅವನು ತನ್ನ ಸಂಕಷ್ಟಗಳನ್ನು ಹೇಳಿಕೊಳ್ಳಲಾಗದ,
ಹೇಳಿದರೂ ಅದಕ್ಕೊಂದು ಚೆಂದದ
ಸಮರ್ಥನೆ ಜೋಡಿಸಿ ಇನ್ನಷ್ಟು
ತೊಳಕಾಟಕ್ಕೆ ಹಚ್ಚಿ ಮೋಜು ನೋಡುವ
ಕಲಾವಂತಿಕೆ ಅವಳಲ್ಲಿದೆ
ನಿಜವೆಂದರೆ ಇದೆಲ್ಲವೂ ಅವಳಿಗೆ ಗೊತ್ತು, ಆದರೂ ಅವನನ್ನು ಗೋಳಿಗೆ
ಸಿಕ್ಕಿಸಿ ಅಮಾಯಕಳಂತೆ ಇದ್ದುಬಿಡುವ
ಅವಳ ನಿರೀಕ್ಷೆ ಇಷ್ಟೇ
ಹೇಗಾದರೂ ಸರಿ ಅವನು ಸದಾ
ತನ್ನ ಗುಂಗಿನಲ್ಲಿರಲಿ ಎನ್ನುವುದು
ಭಾರತಿ ಅಶೋಕ್
ಚಂದ