ಮೌನದಲಿಮುಗಿದಒಂದುರಾತ್ರಿ….ವೈ.ಎಂ.ಯಾಕೊಳ್ಳಿ

ಅಹಂಮ್ಮಿನ‌ ಕೋಟೆಯೊಳಗೆ
ನಲಗುತ್ತೇವೆ ನಾವಿಬ್ಬರೂ
ಇಬ್ಬರಿಗೂ ಗೊತ್ತಿದೆ
ತಪ್ಪು ಇಬ್ಬರದಲ್ಲ
ಕಾಲದ್ದು ಎಂದು

ಬಂದದ್ದು ಜಗಳವಾದರೂ ಏತಕ್ಕೆ?
ಕೈಗೆ ಸಿಗದ ಪ್ಯಾಂಟಿಗೋ,
ಚೂಡಿಗೋ,ಔಷದದ ಚೂರಿಗೋ
ಏನೋ ಒಂದಕ್ಕೆ..

ಅಷ್ಟಕ್ಕೆ ಮಾತು ಸರ್ ಅಂತ
ಹತ್ತಿ ಉರಿದು
ಸುತ್ತೆಲ್ಲ ಕಿಡಿಗಳ ಹರಡಿ
ಬೆಂಕಿ ಧಗಧಗ.ಮತರ್ಧ ದಿನ‌
ಮಾತಿಲ್ಲದ ಮೌನಯುದ್ದ
ಒಳಗೊಳಗೇ ಬೇಯುವ
ಮನಸಿನ ತುಡಿತ..

ಆದರೂ‌ ಹೊರಬರದ ಮಾತು
ಅಂಹಮ್ಮಿನ ಪ್ರತಿರೂಪ
ಮಾತಾಡಲಿ ಬೇಕಾದರೆ ಅವನೆ..ಅಲ್ವೆ
ಕಿಡಿ ಹೊತ್ತಿಸಿದ್ದು…ಅವಳ ಯೋಚನೆ,
ಅವನಿಗೊ‌…. ಎಷ್ಟು ಧಿಮಾಕು
ಇವಳಿಗೆ ತಂದು ಹಾಕುವ
ನನಗೆ…ಮಾತಾಡುವಳಲ್ಲಾ
 ಧುಮಸದ ಹೊಗೆ…

ಹೀಗೆ ದಿನವೆಲ್ಲ‌ ವ್ಯರ್ಥ ದಲಿ
ಕಳೆದರೆ  ಸಂಜೆಗೂ ಮೋಡದ
ಒಳಗೆ ಮುಸುಕಿದ ಸೂರ್ಯನಿಗೂ
ಇನ್ನೂ ಹೊರಬಹದ ತಹತಹ
————————————–

Leave a Reply

Back To Top