ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ
ಬಯಲಿಗೆ ಬಿದ್ದ ಭಾವ

ಬಯಲಿಗೆ ಬಿದ್ದಿತಲ್ಲ ಭಾವ
ಯಾರೂ ನೋಡದ ನೋವ
ಮೀಟಿತು ಶೃತಿಯಿಲ್ಲದ ವೀಣೆ
ಯಾರು ನುಡಿಸಿ ಮರೆತರೋ
ತಂತಿ ಸ್ಪರ್ಶಿಸಿ ಅಡಗಿದರೋ
ರಾಗ ತಾಳ ಲಯವ ನಾ ಕಾಣೆ
ನುಡಿಸಿರಿ ಸ್ವಪ್ನಲೋಕದಲ್ಲಿರಿಸಿ
ಧ್ಯಾನದಲ್ಲಿದ್ದ ಮನವನೆಬ್ಬಿಸಿ
ಯಾರೂ ಹಾಡದ ಕವಿತೆಯೋ
ಪಲ್ಲವಿಸದ ಪದದ ಪದ್ಯವೋ
ಕರುಣೆಯಿಲ್ಲದೆ ಮೀಟುತ
ಉಕ್ಕಿನುಗುರ ಎದೆಗೆ ಒತ್ತುತ
ಕರುಳ ಬಳ್ಳಿಗೆ ತೀವಿಯುತ
ಉಕ್ಕಿ ಬಂದ ವೇದನೆ ತಳ್ಳುತ
ಕಾಣರು ತಂತಿ ಮೀಟಿದವರು
ನೋವ ನುಂಗಿದ್ದು ನೋಡರು
ವೀಣೆಗೆ ವೇದನೆಯ ನೀಡಿದರು
ನೊಂದೆ ಎಂದರೂ ಪೀಡಿಸಿದರು
ಡಾ.ರೇಣುಕಾತಾಯಿ.ಸಂತಬಾ

Super madam.
