ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಹನಿ ಕಂಬನಿಗೂ ಕರುಣೆ ಇದೆ

ಹನಿ ಕಂಬನಿಗೂ ಇಲ್ಲಿ ಕರುಣೆ ಇದೆ
ನೀನು ನನಗೇಕೆ ಹೀಗೆ ಶಿಕ್ಷಿಸಿದೆ!
ನನ್ನ ಈ ಪ್ರೀತಿಗೆ ನ್ಯಾಯವು ಎಲ್ಲಿದೆ
ಭಗವಂತ ಬರೆದ ಹಣೆಬರಹದಲ್ಲೇನಿದೆ!!
ನನ್ನಿಂದ ನೀನೆಂದು ದೂರ ಹೋಗದಿರು
ನನ್ನ ಉಸಿರಲ್ಲಿ ಉಸಿರಾಗಿ ಬಿರುತಿರು!
ಸುಡುವ ಬಿಸಿಲಂತೆ ನನ್ನ ನೀ ಕೊಲ್ಲದಿರು
ಬೆಂಕಿ ಕಿಡಿ ಹಚ್ಚಿಕೊಳ್ಳಲು ನೀ ಬಿಡದಿರು!!
ನಿನ್ನ ಕೋಪಕ್ಕೆ ನನ್ನ ಬಲಿಯ ಮಾಡದಿರು
ರೋಷದ ದ್ವೇಷಕ್ಕೆ ನೀ ನನ್ನ ಮರೆಯದಿರು!
ನಾ ಕಾಯುವೆ ಬೇರೆ ಯಾರ ಮಾತು ಕೇಳದಿರು
ನನ್ನ ಬಿಟ್ಟು ನೀನು ಯಾರನ್ನು ಮುಟ್ಟದಿರು!!
ನಿನ್ನ ಮನಸೇಕೆ ಇಲ್ಲಿ ಬದಲಾಗಿ ಬಿಟ್ಟಿತು
ಜೊತೆ ಕಳೆದ ದಿನಗಳನ್ನು ಮರೆ ಮಾಚಿತು!
ನಿನ್ನ ಹೃದಯವೇಕೆ ನನ್ನನ್ನು ತಿರಸ್ಕರಿಸಿತು
ಕಲ್ಲಲ್ಲು ಅರಳಿದ ಹೂವನ್ನು ಚೂರು ಮಾಡಿತು!!
ಕೆ.ಎಂ. ಕಾವ್ಯ ಪ್ರಸಾದ್
