ಪರವಿನ ಬಾನು ಯಲಿಗಾರ ಅವರ ಕವಿತೆ “ಉರಿಯಿತು ಹಕ್ಕಿಯ ರೆಕ್ಕೆ”

ಲೋಹದ ಹಕ್ಕಿಯನೇರಿದರು ಅವರು ,
ಕಟ್ಟಿಕೊಂಡವರೆಷ್ಟೋ ಕನಸುಗಳ ,
ಹೊತ್ತುಕೊಂಡವರೆಷ್ಟೋ ಹೊಣೆಗಳ ,
ಪೂರೈಸಬೆಕಿತೆಷ್ಟೋ ಜವಾಬ್ದಾರಿಗಳ ,
ಕ್ಷಣಾರ್ಧದಲ್ಲಿ ಕಸಿಯಿತು ವಿಧಿ ಅವರ ಉಸಿರು …..

ಗಳಿಸಿದ ಅಧಿಕಾರದ ಗದ್ದುಗೆ ,
ಪಡೆದ ಪದವಿ , ಜ್ಞಾನ ,
ಶೇಖರಿಸಿದ ಸಿರಿ , ಸಂಪತ್ತು ,
ಕೂಡಿದ ಸ್ನೇಹ ಸಂಬಂಧ ,
ಕಾಲನ ಮುಂದೆ ಎಲ್ಲವೂ ಶೂನ್ಯ ….

ಹೊತ್ತಿ ಉರಿದಿದ್ದು ಬರೀ ದೇಹಗಳಲ್ಲಾ ,
ಹಲವರ ಭರವಸೆ , ಕೆಲವರ ವಿಶ್ವಾಸ ,
ಪ್ರೀತಿ , ಕನಸು , ಗುರಿ , ನಗು , ನೆಮ್ಮದಿ
ಸಂತೋಷ ಮತ್ತು ಭವ್ಯ ಭವಿಷ್ಯ ಹೊತ್ತ ನಿರ್ಮಲ ಮನಸುಗಳು …..

ಕಣ್ಣೀರಿನ ಕಡಲಾಗಿದೆ ಭಾರತೀಯರೆಲ್ಲರ ಒಡಲು ,
ಸೂತಕದ ಛಾಯೆಯೇ ಎಲ್ಲೆಲ್ಲೂ ,
ಸುಖಕರ ಪ್ರಯಾಣದ ಬದಲು
ಕಳೆದು ಹೋದವು ನೂರಾರು ಪ್ರಾಣಗಳು ,
ರಕ್ಷಿಸಲಿಲ್ಲ ಅವರನ್ನು , ಯಾರ ಹರಕೆ , ಹಾರೈಕೆಗಳು , ಫಲಿಸಲಿಲ್ಲ ಯಾವ ಪೂಜೆ , ಪ್ರಾರ್ಥನೆಗಳು …..


5 thoughts on “ಪರವಿನ ಬಾನು ಯಲಿಗಾರ ಅವರ ಕವಿತೆ “ಉರಿಯಿತು ಹಕ್ಕಿಯ ರೆಕ್ಕೆ”

  1. ಹೃದಯಸ್ಪರ್ಶಿ ಕವನ ಮೇಡಂ

Leave a Reply

Back To Top