ಕಾವ್ಯ ಸಂಗಾತಿ
ಭಾರತಿ ಅಶೋಕ್ ಅವರ
ಕಂಗಳ ಕದಲಿಕೆ ಮತ್ತು ಕಾಫಿ

ಅವರು ಭೇಟಿಯಾದಾಗ
ಜಗತ್ತಿನ ಪ್ರೇಮಿಗಳನ್ನು
ಅವರೆದುರು ನಿವಾಳಿಸಬೇಕು
ಹಾಗೆ ಬೆಸೆದುಕೊಳ್ಳುತ್ತಾರೆ
ಎದುರು ಬದುರು ಕೂತಿದ್ದರೂ
ಕಂಗಳ ಕಣಿವೆಯಲ್ಲಿ ಸಂಚರಿಸುತ್ತಾರೆ, ಗಂಗಳೀಗ ಸಂಲಗ್ನಗೊಳ್ಳುತ್ತವೆ.
ಮೌನವೆಲ್ಲವೂ
ಶತಮಾನದಿಂದ ಕಿತ್ತುಕೊಂಡ ಅಮರ ಪ್ರೇಮಿಗಳ ವಿರಹವನ್ನೇ ಹರಟುತ್ತವೆ ಇನ್ನೆಂದೂ ಅದು ಕಾಡದಂತೆ

ನಿಶ್ಯಬ್ದ
ಅಲ್ಲಿ ಮೌನ ಪಿಸುಗುಡುವ ಸದ್ದಿನದೇ
ಸಾಮ್ರಾಜ್ಯ, ವೇಯಿಟರ್ನ
ಉಸಿರನ ಸದ್ಧು ಅವರನ್ನು ಲವರ್ಸ್ ಪ್ಯಾರಡೈಸ್ ಹೋಟಲಿನ ವಾಸ್ತವಕ್ಕೆ ತಂದೆಸೆಯುತ್ತೆ
ಅವರ ಕಂಗಳ ಕದಲುವಿಕೆ ಗಮನಿಸಿದ ವೆಯಿಟರ್
“ಸರ್ ಆರ್ಡರ್ ಪ್ಲೀಸ್” ಅನ್ನುತ್ತಾನೆ,
ಇವರಿಗೆ ತಿನ್ನಲು ಕುಡಿಯಲು ಹೊಟ್ಟೆ ನೆತ್ತಿಯಲ್ಲಿ ಜಾಗವಿಲ್ಲ, ಅದರೂ ಆ ಹೋಟಲಿನ ‘ಸ್ಪೆಷಲ್’ ಕೋಲ್ಡ್ ಕಾಫಿ ಅರ್ಡರ್ ಮಾಡುತ್ತಾರೆ.
ವೆಯಿಟರ್ ಗೆ ನಿಜಕ್ಕು ಅಚ್ಚರಿ
ಗಂಟೆಗಟ್ಟಲೆ ಕೂತವರು ಬರೀ ‘ಕಾಫಿಗಾಗಿ’ನಾ ?
ಕಾಫಿ ಸವ್೯ ಮಾಡುತ್ತಾನೆ
ಡಾ. ಭಾರತಿ ಅಶೋಕ್

ಬಹಳ ಚನ್ನಾಗಿದೆ