ಕಾವ್ಯ ಸಂಗಾತಿ
ಜಯಂತಿ ಕೆ ವೈ
ಬದುಕ ಹುಣ್ಣಿಮೆ

ನಿನ್ನ ಗುಳಿ ಕೆನ್ನೆಯ ನಗುವಿನ
ಮಧುರಭಾವ ಮನಕೆ ತಂಪೆರೆವಾಗ
ಬದುಕ ತುಂಬಾ
ಮಳೆಬಿಲ್ಲ ರಂಗು
ಕಾರಣವೇ ಇಲ್ಲದೆ ಪುಳಕ
ಹೇಳಲು ಬಾರದ ತವಕ
ಒಂದಾಗುವ ಪ್ರತಿ ಘಳಿಗೆಯಲ್ಲೂ
ರಂಗುರಂಗಿನ ಓಕುಳಿ

ಹಿತವಾದ ಅಪ್ಪುಗೆ
ಬೆಚ್ಚನೆಯ ಪಿಸುಮಾತು
ಕಾಮನಬಿಲ್ಲ ಕನಸು
ನನಸಾಗುವ ಹೊತ್ತು
ನಿನ್ನಪ್ಪುಗೆಯ ಬಿಸಿ
ತಂಗಾಳಿಯ ತಂಪು
ಬಿಸಿಯುಸಿರ ನಡುವೆ
ಕಂಗಳಲಿ ಇಂದ್ರಛಾಪ
ಕೆನ್ನೆ ತುಂಬಾ ಒಕುಳಿ
ತಿಂಗಳ ಬೆಳಕು ಹರಡಿ
ಕಣ್ಣ ತುಂಬಾ ಮಿಂಚು
ಹಾಲ ಬಿಳುಪು ನಗೆಯಲ್ಲಿ ಮಿನುಗಿ ಬದುಕಲಿ ಬಣ್ಣ ತುಂಬಿತ್ತು!
ಜಯಂತಿ ಕೆ ವೈ

ಸೊಗದನುಭವವನುಣಿಸಬಲ್ಲ ಸೊಗಸಾದ ಪದಪುಂಜ !
ಧನ್ಯವಾದಗಳು
ಸೊಗಸಾದ ಕವನ
ಸೊಗಸಾದ ಕವನ