ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
“ಬೆಳಕು“

ಮನೆ-ಮಡದಿ ಬಿಟ್ಟವರೆಲ್ಲ
ಗೌತಮಬುದ್ದನಾಗಲಿಲ್ಲ.!
ಪಿತೃವಾಕ್ಯ ಪಾಲಿಸಿದವರೆಲ್ಲ
ಶ್ರೀರಾಮಚಂದ್ರನಾಗಲಿಲ್ಲ.!
ಕಾವಿಬಟ್ಟೆ ಉಟ್ಟವರೆಲ್ಲ
ಸ್ವಾಮಿ ವಿವೇಕರಾಗಲಿಲ್ಲ.!
ಖಾದಿಟೋಪಿ ತೊಟ್ಟವರೆಲ್ಲ
ಮಹಾತ್ಮಾಗಾಂಧಿಯಾಗಲಿಲ್ಲ.!
ಆತ್ಮ ಮಹಾತ್ಮನಾಗಲು..
ಅಂತಃಸತ್ವವಿರಬೇಕು.!
ನರ ನಾರಾಯಣನಾಗಲು
ದೃಢತತ್ವ ಬೇಕೇಬೇಕು.!
ಆತ್ಮಶೋಧನೆ ಬೇಕು.
ಸತತ ಸಾಧನೆ ಬೇಕು.!
ಅವಡುಗಚ್ಚಿ ಸಕಲ
ವೇದನೆ ಸಹಿಸಬೇಕು.!
ಛಲಬಿಡದ ನಿರಂತರ
ಶ್ರಮ-ತಪನೆ ಬೇಕು.!
ತೇಯ್ದಷ್ಟೂ ಘಮಿಸುವ
ಶ್ರೀಗಂಧವಾಗಬೇಕು.!
ಕರಗಿ ಬೆಳಕಾಗುವ
ಕರ್ಪೂರವಾಗಬೇಕು.!
ಜೀವ ದೈವವಾಗಲು
ಉರಿದು ಪ್ರಜ್ವಲಿಸಬೇಕು.!
————–
ಎ.ಎನ್.ರಮೇಶ್. ಗುಬ್ಬಿ.

ಬಹಳ್ ಉತ್ತಮವಾದ ಕಾವ್ಯಾದ ಝಲಕ್ಕಗಳಿವೆ ಸರ್
ಓದಿದಷ್ಟು ಉತ್ಸಾಹ ತರುವ ರಚನೆಗಳು
ಧನ್ಯವಾದಗಳು ಸರ್
ಅರ್ಥಪೂರ್ಣ ಕವಿತೆ….
…….ಶುಭಲಕ್ಷ್ಮಿ ನಾಯಕ್