ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೋದಿಗೆರೆಯ ಶ್ರೀನಿವಾಸ ಎಚ್ಚೆಸ್ವಿ

ಮೂವತ್ತು ಮಳೆಗಾಲಗಳ ರೋಚಕ ಅನುಭವ
ಇಂದುಮುಖಿ ಸಾಹಿತ್ಯ ಸಂಭ್ರಮದ ಸಿರಿ ವಿಭವ
ಒಣಮರದ ಗಿಳಿಗಳು ಹಾಡಿರಲು ಮೈಮರೆತು
ಮೂಡಿದವಾಗ  ಹಸಿರಿನ ಎಲೆಗಳು ನೂರಾರು

ಕನ್ನಡ ಸಾಹಿತ್ಯ ಶರಧಿಗೆ ಇವರೇ ಹರಿಗೋಲು
ಮೊಖ್ತಾ ಬಂದು ಜನತೆಯೊಡನೆ ಸಂವಾದಿಸಿರಲು  
ವಿಸರ್ಗವಾದವು ಋಣಾತ್ಮಕ ನಕಾರಾತ್ಮಕತೆಗಳು  
ವಿಮುಕ್ತಿಯಾದವು ಮನದೆಲ್ಲ ಅಶಾಂತಿ ಗೊಂದಲಗಳು

ಅಮೆರಿಕಾದಲ್ಲಿ ಬಿಲ್ಲುಹಬ್ಬ ನೋಡಲು ತೆರಳಿರಲು
ಭೂಮಿಯೂ ಒಂದು ಆಕಾಶವೆಂದು ಹೇಳಿದರು
ಸಿಂದಾಬಾದನ ಆತ್ಮಕಥೆಯನ್ನು ಬರೆಯುತಲಿ
ಅಗ್ನಿಸ್ತಂಭ ಮರೆತ ಸಾಲುಗಳ ಪ್ರಸ್ತಾಪ ಮಾಡಿದರು

ಬಾಗಿಲು ಬಡಿವ ಜನಗಳ ಗೋಳಿಗೆ ಕಿವಿಯಾಗಿ  
ಎಷ್ಟೊಂದು ಮುಖ ತೋರುವವರ ಕನ್ನಡಿಯಾಗಿ
ಆತ್ಮೀಯತೆ ಸ್ನೇಹಗಳ ಸುಂದರ ಪರಿವೃತ್ತವಾಗಿ
ಸಿಕ್ಕಿಹರು ಕನ್ನಡಿಗರ ಸುಕೃತ ಸೌಗಂಧಿಕವಾಗಿ

—————————–

ಸುಜಾತಾ ರವೀಶ್

About The Author

2 thoughts on “ಅಗಲಿದ ಹಿರಿಯ ಜೀವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅವರದೇ ಕವನ ಸಂಕಲನಗಳ ಶೀರ್ಷಿಕೆಗಳನ್ನೊಳಗೊಂಡ ಅಕ್ಷರ ನಮನ.”

  1. ಸೊಗಸಾದ ಕವನ ಗೆಳತಿ, ಮನದಲ್ಲೇನೋ ಕಳೆದು ಕೊಂಡ ಅನುಭವ

Leave a Reply

You cannot copy content of this page

Scroll to Top