ಶಾರು ಅವರಹೊಸ ಗಜಲ್

ಗಜಲ್

ಪ್ರೇಮದ ತಂಪು ಮರುಭೂಮಿಯಲಿ ಹಸಿರಾಯಿತು
ಹನಿಹನಿಯಾದ ನೆನಪು ಹೂವಿನಲಿ ಸುಗಂಧವಾಯಿತು.

ಮೌನ ಬೆರಗಾಯಿತು ಕನ್ನಡಿ ಕಾಣುವ ಬಿಂಬದಲಿ
ಹೃದಯದ ಅಳಲು ಕಣ್ಣಿನ ಅಂಚಿನಲಿ ಸಾಗರವಾಯಿತು.

ನಂಬಿಕೆ ನೋಟವು ಸಾಕು ಬದುಕು ಬದಲಾಗಲು
ಕಣ್ಣಿನ ಕಿರಣ ಹೃದಯದಲಿ ದೀಪವಾಯಿತು.

ವಾತ್ಸಲ್ಯವೆಂಬ ಬೆಚ್ಚಗಿನ ಹಾಸು ಬೆಳದಿಂಗಳು
ದುಃಖದ ಕನಸು ಮೂಡಿ ಮುಗಿಲಲಿ ಮಳೆಯಾಯಿತು

ಸದಾ ನಿನ್ನೊಂದಿಗಿರಲು ಬೇಕಿಲ್ಲ ಪದಗಳ ಹಕ್ಕು,
ಮೌನದ ಮುತ್ತು ಶಾರು ಪ್ರೇಮದಲಿ ಭಾಷ್ಯವಾಯಿತು.


3 thoughts on “ಶಾರು ಅವರಹೊಸ ಗಜಲ್

    1. ಧನ್ಯವಾದಗಳು ಆಭಾರಿ ಸರ್…_/\_

Leave a Reply

Back To Top