ಮಕ್ಕಳ ಸಂಗಾತಿ
ಟಿ.ಪಿ.ಉಮೇಶ್
ರಜೆಯ ಮೋಜು ಸಾಕಿನ್ನು!

ರಜೆಯ ಮೋಜು ಸಾಕಿನ್ನು!
ರಜೆ ದಿನಗಳು ಮುಗಿದವು;
ಶಾಲೆಯು ಆರಂಭವಾಯಿತು ಮಗುವೆ!
ರಜೆ ದಿನಗಳು ಬರುವವು;
ಈಗಲೆ ಕಲಿಯಲು ಹೊರಡು ಮಗುವೆ!
ಬೇಸಿಗೆಯ ರಜೆಯಿದು;
ಬಿಸಿಲಿನ ತಾಪದಿ ನಿನ್ನ ರಕ್ಷಿಸಿತಲ್ಲವೆ!
ಉರಿ ಧಗೆ ಕಾಲವಿದು;
ತಂಪಾಗಿ ನೀ ಮನೆಯಲ್ಲಿದ್ದೆಯಲ್ಲವೆ!
ಓದು ಬರಹ ಸಂತಸವೆ;
ಬದುಕಿನ ದಾರಿಗೆ ಕಲಿಕೆ ಬೆಳಕಲ್ಲವೆ!
ಲೆಕ್ಕ ಕಲಿಕೆ ಹೊಸತನವೆ;
ಭವಿಷ್ಯದ ಪ್ರಗತಿಗಾಗಿ ಅಗತ್ಯವಲ್ಲವೆ!
ಬಾಲ್ಯದ ವಿದ್ಯೆ ಕಲಿಯಲು;
ಮೇಡಂ ಮೇಷ್ಟ್ರ ಕಾಯಿಸಬಾರದಲ್ಲವೆ!
ಕಲಿವಿನ ಶ್ರದ್ಧೆ ನಿನಗಿರಲು;
ಶಾಲೆ ಪಾಠಗಳು ಸರಳ ಸುಲಭವಲ್ಲವೆ!
ಬಡತನವು ಹಲವರಿಗುಂಟು;
ಉಚಿತ ಶಿಕ್ಷಣ ಭಾರತ ದೇಶದಲ್ಲಿದೆಯೆ!
ಶಿಕ್ಷಣದಿಂದ ಶ್ರೇಷ್ಠತೆಯುಂಟು;
ಬುದ್ಧಿವಂತರಾದರೆ ಸಿರಿವಂತಿಕೆಯಿದೆಯೆ!

ಕಲಿಕೆಯನ್ನು ತಪ್ಪಿಸ ಬೇಡ;
ವಿನಯ ವಿದ್ಯೆ ಶಿಸ್ತಿಗೆ ಗೌರವವಿದೆಯೆ!
ಹಿರಿಯರ ಮಾತ ಮೀರಬೇಡ;
ಜಾಣತನಕ್ಕೆ ವಿಶ್ವ ಮಾನ್ಯತೆಯಿದೆಯೆ!
ರಜೆಯ ಮೋಜು ಸಾಕಿನ್ನು;
ಪುಸ್ತಕ ಪೆನ್ನು ಅಕ್ಷರದಲ್ಲಿ ಬಲವಿದೆಯೆ!
ಶಾಲೆಯ ದಾರಿ ಹಿಡಿಯಿನ್ನು;
ನೀನೆ ಭಾರತ ಬೆಳಗುವ ಭರವಸೆಯೆ!
ಟಿ.ಪಿ.ಉಮೇಶ್
