ಕಾವ್ಯ ಸಂಗಾತಿ
ಶಾರದ ಜೈರಾಂ.ಬಿ
ಬದುಕ ಅರಿತಾಗ

ಪುಸ್ತಕದ ಅಂಗಡಿಯಲ್ಲಿ
ಪುಸ್ತಕದ ಸಾಲಿನೆಡೆ
ಕಣ್ಣನೋಟ ಹರಿಸಿದೆ
ನಿಜಕ್ಕೂ ಸೋಜಿಗವೆನ್ನಿಸಿತು
ಕಾರಣ ಅಲ್ಲಿದ್ದ ಪುಸ್ತಕಗಳ
ಶಿರೋನಾಮೆ ಕಂಡು
ಮಧುಮೇಹ ನಿಯಂತ್ರಿಸಲು
ತೂಕ ಇಳಿಸಲು ಉಪಾಯಗಳು
ಕೋಪ ನಿಯಂತ್ರಿಸುವುದು ಹೇಗೆ
ರಕ್ತದೊತ್ತಡ ನಿಯಂತ್ರಣದಲ್ಲಿಡಲು
ಮಕ್ಕಳನ್ನು ಬೆಳೆಸಲು
ಇನ್ನು ಇದೇ ರೀತಿಯ
ಹೆಸರಿನ ಹಲವು ಬಗೆಯವು
ಇದೆಲ್ಲಾ ಬದುಕಿನ ಅನುಭವಗಳಿಂದ
ಕಲಿತು ಹಿರಿಯರಿಂದ ತಿಳಿದು
ಬರುವಂತವುಗಳಿಗೂ ಮಾರುಕಟ್ಟೆಯೇ ಖರೀದಿಸಲು ಮನುಜರಿರುವಾಗ ಆದರೂ
ಅರೆ ಘಳಿಗೆ ಅವಲೋಕಿಸಿದಾಗ
ನಿಜ ಹಿರಿಯ ಜೀವಗಳೆಲ್ಲ ವೃದ್ಧಾಶ್ರಮಗಳಲ್ಲಿ ಬದುಕಿನ
ಪಾಠ ಕಲಿಯಲು ಪುಸ್ತಕದ ಮೊರೆ
ಹೋಗಿಹರು ಅರಿತು ಎಲ್ಲರೊಂದಿಗೆ
ಬೆರೆತು ಬದುಕ ಸಾಗಿಸಿದರೆ
ಅನುಭವದ ಹಿರಿಯ ಜೀವದ ಪಾಠದ ಮುಂದೆ ಈ ತರದ ಪುಸ್ತಕಗಳೇ ತುಸು ಯೋಚಿಸಬೇಕಿದೆ
ಏನಂತೀರಾ?
———–
ಶಾರದ ಜೈರಾಂ.ಬಿ

Literally it’s a true words about present generation.
S thank you