ಕಾವ್ಯ ಸಂಗಾತಿ
ನಾನು ಬರೆಯುತ್ತೇನೆ
ಸುಧಾ ಪಾಟೀಲ

ನಾನು ಈಗೀಗ
ನಿರಂತರವಾಗಿ
ಬರೆಯುತ್ತಿದ್ದೇನೆ
ಕವನ ಕಾವ್ಯ ಕಥನ
ಸತ್ತ ಭೂತ
ಮಲಗಿದ ವರ್ತಮಾನದಿ
ಬಣ್ಣದ ಭವಿಷ್ಯಕ್ಕೆ
ಭರವಸೆಯ ಭದ್ರ
ಬುನಾದಿ ಹಾಕಲು
ನಿತ್ಯ ಅಳುವು ಮರೆಸಲು
ಹುಸಿ ನಗೆಯ ಭರವಸೆ
ಹಸಿರು ಹಾಸಿಗೆ ಮೇಲೆ
ಖುಶಿ ಪಟ್ಟು
ಕನಸುಗಳನ್ನು ಒತ್ತೆ ಇಡುತ್ತೇನೆ
ಮಳೆ ಗಾಳಿ ಬಿಸಿಲು ಬೆಳದಿಂಗಳು
ಹುಡುಕುತ್ತಿದ್ದೇನೆ ನನ್ನ
ಪುಟ್ಟ ಗೂಡಿನ ಬಾಳು
ತಿಜೋರಿಯಲ್ಲಿನ
ರಾಷ್ಟ್ರ ಪ್ರೇಮ
ಕೇವಲ ಭಾಷಣ ಟಿವಿ ಸಂದರ್ಶನ
ಪತ್ರಿಕೆಯಲ್ಲಿ ಮುಖ ಪುಟಕೆ
ದೊಡ್ಡ ಫೋಟೋ
ಅಂದು ನನ್ನ ಬಳಿ ಬಂದು
ಅತ್ತಿಮಬ್ಬೆ ಶಾಂತಲೆ ಎಂದವರೇ
ಇಂದು ನನ್ನ ಕೃತಿ ಕಂಡು
ಮೂಗು ಮುರಿಯುತ್ತಾರೆ
ನಾನು ಹೀಗೆಯೇ
ಬರೆಯುತ್ತೇನೆ
ಬರೆಯುತ್ತಲೇ ಇರುತ್ತೇನೆ
ಹಿಚುಕುವುದಿಲ್ಲ
ತಿವಿಯುವುದಿಲ್ಲ ಭಾವಗಳ
ಹೊರಗೆ ಸಪ್ಪಳ ಗದ್ದಲ
ಒಳಗೊಳಗೇ ಸಂಘರ್ಷ
ಕವನ ಕಾವ್ಯಕ್ಕೆ ಶರಣು
ಸರಸ ಸಂಭ್ರಮದ ಸಡಗರ
ಯಾರು ಏನೇ ಅನ್ನಲಿ ಬಿಡಲಿ
ಬರೆಯುವುದು ನನ್ನ ಧರ್ಮ
ನಾನು ಬರೆಯುತ್ತೇನೆ
ಸುಧಾ ಪಾಟೀಲ
ಕವಿತೆ ಚೆನ್ನಾಗಿದೆ ಮೇಡಂ ಧನ್ಯವಾದಗಳು
ಸೂಪರ್ ..ನಿಜ ಬರೆಯಿತ್ತಿರಬೇಕು ನಮಗಾಗಿ ನಮ್ಮ ಸಮಾಧಾನಕ್ಕಾಗಿ..ಚಂದ ಬರೆದಿದೀಯಮ್ಮ