ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
“ಝೆಂಕಾರ”

ನೀ ಎನಗೆ ರತ್ನ ಪಕ್ಷಿ ಬಿಂಕವೇಕೆ ಜಾಣೆ
ಸನಿಹಕ್ಕೆ ಬಾರದೆ ದೂರಕ್ಕೆ ಓಡುತ್ತಿರುವೆ
ಚಲಿಸುವ ಮೋಡಗಳೇ ನಿನ್ನ ಭಾವನೆ
ಪ್ರಶಾಂತ ಗಾಳಿಯಲ್ಲಿ ಒಲವಿನ ಸೆಳೆತ
ಹಗಲಿರುಳೆನ್ನದೆ ಒಳಗೊಳಗೆ ಬಡಿತ
ಕಾಡುವ ಮನಕ್ಕೆ ಝೆಂಕರಿಸುವ ನಿನ್ನಯ ಮಿಡಿತ
ಬದುಕಿಗೆ ಸ್ಫೂರ್ತಿ ನೀನೇ ಅಲ್ಲವೇ
ಬದುಕಿನ ಸೊಬಗು ನೀನೇ ಚೆಲುವೆ
ಸಾಯುವ ಮನಕ್ಕೆ ಜೀವಂತಿಕೆ ಚೇತರಿಕೆ
ಮಾಜಾನ್ ಮಸ್ಕಿ
