ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶ್ವ ಜೀವ ವೈವಿಧ್ಯ ದಿನ— ಬನ್ನಿ, ನಿಸರ್ಗ ಸೌಂದರ್ಯವನ್ನು ಕಾಪಾಡಿ ಕೊಳ್ಳೋಣ

ನಿಸರ್ಗ ಎಂಬುವುದು ನಮ್ಮ ಜೀವನದ ಅವಿಭಾಜ್ಯ ಅಂಗ. ನಿಸರ್ಗ ಇಲ್ಲದ ಜೀವನವನ್ನು ಕಲ್ಪಿಸಿ ಕೊಳ್ಳುವುದು ಸಾಧ್ಯವಿಲ್ಲ. ಮನುಷ್ಯ ನಿಸರ್ಗ ದಡಿಯಲ್ಲಿ ಹೇಗೆ ಬದುಕೊಂತ್ತಾನೋ ಹಾಗೆ ಎಲ್ಲ ಜೀವಿಗಳಿಗೆ ಬದುಕುವ ಹಕ್ಕಿದೆ. ಎಲ್ಲ ಪ್ರಾಣಿ ಮತ್ತು ಪಕ್ಷಿಗಳು ತಮ್ಮ ವಿಶಿಷ್ಟವಾದ.  ಸೌಂದರ್ಯದಿಂದ  ನಿಸರ್ಗದ ಸೌಂದರ್ಯಕ್ಕೆ ತಮ್ಮದೇ ಆದ ಮೆರುಗು ತಂದಿವೆ. ಅದೇ ಕಾರಣದಿಂದಲೇ ಅವಕ್ಕೆ ಜೀವ ವೈವಿಧ್ಯ ಎಂದು ಕರೆಯಲಾಗಿದೆ.
ಸಣ್ಣ ಸಣ್ಣ ವೈರಸ್, ಬ್ಯಾಕ್ಟೀರಿಯಾ, ದಿoದ ಹಿಡಿದು, ಡೈನೋಸಾರ್ ದವರೆಗೆ ಎಲ್ಲವೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ.ಅವೆಲ್ಲವು ನಿಸರ್ಗದ ಚೌಕಟ್ಟಿನಲ್ಲಿ. ಬಂಧಿತವಾಗಿವೆ. ಒಂದು ಆಹಾರ ಸರಪಳಿಯಲ್ಲಿ  ಸಣ್ಣ ಪುಟ್ಟ ಹುಳುಗಳನ್ನು ತಿನ್ನುವ ಕೀಟ, ಅದನ್ನು ತಿನ್ನುವ ಕಪ್ಪೆ, ಕಪ್ಪೆಯನ್ನು ಆಹಾರವೆಂದು ಪರಿಗಣಿಸುವ ಹಾವು. ಅದನ್ನು ತಿನ್ನುವ ಗರುಡ,ಎಲ್ಲವೂ ಜೀವ ವೈವಿಧ್ಯದ ಪ್ರಕಾರಗಳಾಗಿವೆ.
ಈ ಜೀವ ವೈವಿಧ್ಯದ ಮಹತ್ತ್ವವನ್ನು ಸಾರಲು ಪ್ರತಿ ವರ್ಷ ಮೇ. 22ರನ್ನು ವಿಶ್ವ ಜೀವ ವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ.ನಮ್ಮ ಮುಂದಿನ  ಜನಾಂಗಕ್ಕೆ ಜೀವ. ಸಂಕುಲದ ಮಹತ್ತ್ವವನ್ನು ಸಾರಲು ಇದನ್ನು ಆಚರಿಸಲಾಗುತ್ತದೆ.
ಪ್ರತಿ ಜೀವಿಯೂ  ಮನುಷ್ಯನನ್ನು ಹೊರತು ಪಡಿಸಿ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ.
ಎರೆಹುಳ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾವು ಸಣ್ಣ ಸಣ್ಣ ಕೀಟಗಳನ್ನು ತಿಂದು ಸಸ್ಯಗಳು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಅಳಿಲುಗಳು ತಾವು ತಿಂದ ಹಣ್ಣಿನ ಬೀಜಗಳನ್ನು ಮಣ್ಣಿನಲ್ಲಿ  ಹೂತು ಕೋಟಿಗಟ್ಟಲೆ ಸಸ್ಯಗಳು ಬೆಳೆಯಲು ಸಹಾಯ ಮಾಡಿವೆ.  ಜೇನುಹುಳುಗಳು ಈ ಜಗತ್ತಿನಿಂದ ಮಾಯವಾದರೆ ದೊಡ್ಡ ಸಸ್ಯ ಕ್ಷಾಮಕ್ಕೆ ಎಡೆ ಮಾಡಿ ಕೊಡುತ್ತದೆ. ಅಷ್ಟರ ಮಟ್ಟಿಗೆ ಜೀವ ವೈವಿಧ್ಯಗಳು ನಿಸರ್ಗದ ಶ್ರೀಮಂತಿಕೆಗೆ ಕಾರಣೀಭೂತ ವಾಗಿವೆ.
ಬನ್ನಿ, ಈ ಜೀವ ವೈವಿಧ್ಯ ಉಳಿಸೋಣ. ನಿಸರ್ಗ ಶ್ರೀಮಂತಿಕೆಯನ್ನು ಹೆಚ್ಚಿಸಿ  ನಿಸರ್ಗಕ್ಕೆ ನಮ್ಮ ಅಳಿಲು ಸೇವೆ    
ಸಲ್ಲಿಸೋಣ.


About The Author

1 thought on ““ವಿಶ್ವ ಜೀವ ವೈವಿಧ್ಯ ದಿನ”—ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ”

Leave a Reply

You cannot copy content of this page

Scroll to Top