ಸುರೇಶ ನೆಗಳಗುಳಿ ಅವರ ಕವಿತೆ-ತಾಯಿ

ಮೊದಲು ಆಡುವ ಮಾತು
ತೊದಲು ನುಡಿಯಲಿ ಬುವಿಗೆ
ಪದವನಿರಿಸಿದ ಸಮಯ ಅಮ್ಮ ಎಂದು
ಎದೆಹಾಲು ಮೊದಲು ಸವಿ
ಸುಧೆಯಾಗಿ ನೀಡುತಲಿ
ಮುದದಿ ಮುದ್ದಿಸಿದಮ್ಮ ಧೀರತಮ್ಮ

ಸಿಡುಕಿರದೆ ಕೆಣಕಿದರು
ಒಡಲಾಳ ಒಲವಿನಲಿ
ಕೆಡುಕು ಬಯಸದೆ ಎತ್ತಿ ಮುದ್ದಾಡುತ
ಕೊಡೆಯಂತೆ ನೆರಳಾಗಿ
ಹಿಡಿದು ಕರ ಮುನ್ನಡೆಸಿ
ನಡೆದವಳು ಮಾತೆ ತಿಳಿ ಧೀರತಮ್ಮ

ಸಮತೂಕ ತಕ್ಕಡಿಯ
ಸಮನಾಗಿ ಹೆತ್ತವರು
ನಮಗೆ ಭಾಗ್ಯದ ಕೊಡುಗೆಯಾಗಿ ಇರುವಾಗ
ನಮನ ಮೊದಲಿರಬೇಕು
ಸಮನಾಗಿ ದೇವರೊಲು
ನೇಮವಾಗಿರೆ ಶುಭವು ಧೀರತಮ್ಮ




One thought on “ಸುರೇಶ ನೆಗಳಗುಳಿ ಅವರ ಕವಿತೆ-ತಾಯಿ

Leave a Reply

Back To Top