ಕೆ ಜೆ ಪೂರ್ಣಿಮಾ ಅವರ ಕವಿತೆ-ಗಳಿಕೆ

ದಿನಕರನಿಂದ ಧಾರಿಣಿಗೆ ಧಾರೆ ಎರೆದ ಮುತ್ತಿನ ಗಳಿಕೆ ಉಂಟೆ ಸಂಖ್ಯೆ?…
ಕಂಡ ಕನಸು ಕನವರಿಸುತ ಇನಿಯನ ಇಂಚರವು ಮಾರ್ಧನಿಸುತ್ತಿದೆ ಕಿವಿಗೆ…
ಗ್ರಹಿಕೆಯ ಗಾಳಿಯು ಸೋಂಕಿ ಸೆಳೆದೊಯ್ತು ಸ್ಪರ್ಶ ಸುಖದ ಗುಂಗಿಗೆ…
ಎದೆಯ ಬಡಿತಕೆ ಹೆಜ್ಜೆ ತಪ್ಪಿ ಲಜ್ಜೆ ಮರೆತು ಕಂಪನವಿಟ್ಟಿತು ಕೌತುಕದ ಚುಂಬನಕ್ಕೆ…. ಕಂಡದ್ದು…..
ಕನಸೋ ನನಸೋ ನನಸೋ ಕನಸೋ ಈ..
ಕನವರಿಕೆಯ ಈ ಮನದ ದರ್ಪಣಕ್ಕೆ……
ಬಯಸಿ ಬಂದ ನನ್ನ ಸಂಗಕೆ ಸಂಗಾತಿ ಸಂಪ್ರೀತಿ ಸಮರ್ಪಿಸಿದೆ ನಿನ್ನ ಭವಿಷ್ಯಕ್ಕೆ…

ಬದುಕ ಬದಲಿಸಿ ಭವಿಷ್ಯ ಬರೆದೆ ಬದಲಾದ ಬದುಕಿಗೆ …
ಅನುದಿನವು ಅರಣಿ ಸಂಗ ಅಗ್ಗವಾಯ್ತು ಉದಯರಾಗಕ್ಕೆ
ಗಳಿಕೆ ಇಳಿಕೆ ಲೆಕ್ಕವಲ್ಲ ಪ್ರೀತಿ ಪ್ರೇಮ ಪ್ರಣಯಕ್ಕೆ…..
ಏನಂತೀರಿ…..


One thought on “ಕೆ ಜೆ ಪೂರ್ಣಿಮಾ ಅವರ ಕವಿತೆ-ಗಳಿಕೆ

Leave a Reply

Back To Top