ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ʼಹೃದಯದೊಲವೇʼ


ಕಲೆಗಳಲಂಕರಣ: ದೂರ ದೂರ ಸಾಗಿದಷ್ಟು ದೂರ
ನೆನಪು ಮಾತ್ರ ಇನ್ನೂ ಹತ್ತಿರ
ಯಾರ ದೃಷ್ಟಿ ತಾಕಿತೋ
ಪ್ರೀತಿ ನಂದಿತೋ
ವಿರಹವೊಂದೇ ಶಾಶ್ವತ
ಪ್ರೇಮಧಾರೆಯೆಲ್ಲಿದೆ
ಒಲವಾಮೃತಾಯೆಲ್ಲಿದೆ
ನಲುಮೆಯ ನುಡಿಯೆಲ್ಲಿದೆ
ನಸುನಗೆಯ ಚೆಲುವೆಲ್ಲಿದೆ
ಆತ್ಮೀಯತೆ ಮರೆಯಾಗಿದೆ
ಒಲವೇ ನನ್ನೊಲವೇ
ನನ್ನುಸಿರ ಜೀವವೇ
ಬರಬಾರದೇ ನನ್ನೆಡೆಗೆ
ನನ್ನೀ ಹೃದಯದ ಕರೆಗೆ
ಪ್ರೀತಿಯ ಅಪ್ಪುಗೆಗೆ
ನಯನಗಳೆರಡು ಕಾದಿವೆ
ನಿನಗಾಗಿ ನಿನ್ನ ದರುಶನಕ್ಕಾಗಿ
ಮನವಿಂದು ಮರುಗಿದೆ
ನಿನ್ನ ನೋಡದೆ
ಕಣ್ಣುಗಳ ಸಂಧಿಸದೆ
ಓ ಪ್ರೇಮವೇ ನೀ ತೊರೆಯದಿರು
ತೊರೆದರೆ ನಡೆದಾಡುವ ಶವ ನಾನು
ಆದರೂ ಬದುಕಬೇಕು
ಮರಳಿ ಬಂದರೆ ನಿನ್ನಪ್ಪಿಕೊಳ್ಳಲು
ಮಗುವಂತೆ ಮುದ್ದಿಸಲು
ತಾಯಿಯಗುವೆ ನೋವ ಮರೆಸಲು
ಸಖಿಯಾಗುವೆ ಸರ್ವಸ್ವವಾಗಲು
ಮಳೆಯಾಗುವೆ ಪ್ರೇಮಧಾರೆ ಸುರಿಸಲು
ದಾಸಿಯಾಗುವೆ ನಿನ್ನ ಸೇವೆ ಮಾಡಲು
ಬಾ ಒಲೆವೆ ಹೃದಯದೊಲವೇ
ಪರಿಮಳ ಐವರ್ನಾಡು ಸುಳ್ಯ