ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಹತ್ತು ತನಗಗಳು

ಒಂಬತ್ತುಮಾಸ ವಾಸ
ಮಾಡೆ ಹರ ಸಾಹಸ
ತಿರುಗಿ ಬಂದಳು ಆ
ಶಕ್ತಿ ಸ್ವರೂಪಿ ಮಾತಾ
ಮಕ್ಕಳಾಟವಾಡದ
ತಾಯಮಡಿಲು ವ್ಯರ್ಐ
ತೊದಲ್ನುಡಿ ಕಿವಿಗೆ
ತುಂಬಿಕೊಂಡಿತು ಅರ್ಥ
ಹೊತ್ತಿಹಳು ಹೊಟ್ಟೆ ಲಿ
ನವಮಾಸ ಧರಿಸಿ
ಮರೆಯದಿರವಳ
ಸೇವೆಯ ಮಾಡು ಪೂರ್ತಿ
ಹೋರಗೆಷ್ಟೇ ಗೆದ್ದರೂ
ನಿಜ ಜಯ ಒಳಗೆ
ಗೆದ್ದರಲ್ಲ ಪರರ
ಗೆಲ್ಲು ನೀ ನಿನ್ನೊಳಗೆ
ಮಕ್ಕಳಾಟವ ಕಂಡು
ಶಿವನು ತಾ ನಕ್ಕನು
ಚಂದ ಮರುಳಾಟಕೆ
ಪಾರ್ವತಿ ನಲಿದಳು
ಮೆರೆದ ರಾಜನಿಗೂ
ದುಡಿವ ರೈತರಿಗೂ
ಇಬ್ಬರಿಗೊಂದೇ ಸೂತ್ರ
ಗೆಲ್ಲುವುದೊಂದೆ ಪಾತ್ರ
ರಾಜದಂಡಕಿಂತಲೂ
ನೇಗಿಲ ಕುಳ ಮೇಲು
ನಿಂತರವನ ರಂಟೆ
ಸ್ತಬ್ಧ ಬಾಳಿನ ಹೂಟೆ
ಕನ್ನಡಿಯಲ್ಲಿ ಕಂಡ
ಒಂದು ಬಿಳಿ ಕೂದಲು
ರಾಜನ ಮನವನು
ಮಾಡಿತದು ಬದಲು
ಊರನೇ ಗೆಲಿದರೂ
ಒಳಗೆ ಇಹ ಶತ್ರು
ಇಲಿಯೊಳಗೆ ಬಿಟ್ಟು
ಬಿಲವ ಮುಚ್ಚಿದರು
ಸಂಸಾರ ಪಥ ಗೆಲ್ಲೆ
ಸಹಕಾರವೇ ಸೂತ್ರ
ಹೊಂದಾಣಿಕೆಯಿರದೆ
ಮಾಡಲಾಗದು ಪಾತ್ರ

———-
ವೈ.ಎಂ.ಯಾಕೊಳ್ಳಿ