ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
“ನಿತ್ಯ ಹಸಿರು ನೀನು”

ಸಾವಿರ ಭಾವಚಿತ್ತಾರಗಳ
ಚುಕ್ಕಿ ಸೇರಿದರೆ ತಾನೇ
ಅಂದದಾ ಹಸೆಯಾಗುವುದು
ಮುಂದಣದ ಹೊಸ್ತಿಲಲ್ಲಿ
ಬರಿದಾದ ಬಿಳಿ ಹಾಳೆಯಲ್ಲಿ
ಮೂಡಿದ ಭಾವಗಳೇ ತಾನೆ
ಅಳಿಸಲಾಗದ ಪದ ಕವಿತೆಯಾಗಿ
ಮನದ ಭಾರ ಇಳಿಸುವುದು
ಸುತ್ತಾ ಮುತ್ತಾ ಎತ್ತ ನೋಡಿದರು
ಕಾಣುವ ನಿಸರ್ಗ ಚೆಲುವು ತಾನೇ
ಭಾವಗಳ ಮಿಳಿತಕೆ ಸಿಲುಕಿ
ನನ್ನೆದೆಯ ಹೊಲದ ನಿತ್ಯ ಹಸುರಾದದ್ದು
ತೀರ ಸಾಗರದಲೆಗಳು
ದಡಕೆ ಅಪ್ಪಳಿಸಿದಾಗಲೆ ತಾನೆ
ನೀನು ನನ್ನತ್ತ ಬಿಕ್ಕುತ್ತಾ ಬಂದು
ಹೃದಯದಲಿ ನಕ್ಕು ನಲಿದದ್ದು
ಸಾವಿರ ಹಣತೆ ಬೆಳಗಿದರೇನು
ಮಿಂಚಿಮಿನುಗೋ ಅಸಂಖ್ಯ ನಕ್ಷತ್ರಗಳಿದ್ದರೇನು
ಚಂದ್ರಮನ ಬೆಳಕಷ್ಟೇ ತಾನೆ
ಚಕೋರನ ಹಸಿವೆ ನೀಗೋದು
ನನ್ನ ಎದೆ ಬಡಿತದ ಶಬ್ದ ನೀನೆ
ಯಾರು ನನ್ನ ಬಳಿ ಬಂದರೇನು
ಕವಿತೆ ನೀನೆ ತಾನೆ ನನ್ನ ಕನಸ ತಣಿಸಿದ್ದು
ಹೊರಲಾಗದ ಭಾವಗಳ ಇಳಿಸಿ
ಹೃದಯ ಹಗುರಾಗಿಸಿದ್ದು….

ವಿಮಲಾರುಣ ಪಡ್ಡoಬೈಲ್