ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಅಧಿಕಾರ

ನೊಂದ
ಜನರ ನೋವುಗಳಿಗೆ
ಸ್ಪಂದಿಸುವ
ಹೃದಯವಾಗಬೇಕು;
ಕಷ್ಟದ ಸಮಯಕ್ಕೆ
ಸಹಾಯ ಹಸ್ತವ ಚಾಚುವ
ಕರವಾಗಬೇಕು;
ಹಸಿವಿನಿಂದ ನರಳುವ
ಒಡಲುಗಳಿಗೆ
ಅನ್ನ ನೀಡುವ
ಕಾಮಧೇನುವಾಗಬೇಕು;
ರೋಗದಿಂದ ಬಳಲುವ
ಕಾಯಗಳಿಗ
ಅನ್ನ ಔಷಧಿ ನೀಡಿ
ಸಂತೈಸುವ
ಶಕ್ತಿಕೇಂದ್ರವಾಗಬೇಕು;
ಬಡತನದಿ ಬಸವಳಿದ
ಸೂರಿಲ್ಲದ
ನಿರ್ಗತಿಕರಿಗೆ
ಆಶ್ರಯ ನೀಡುವ
ತಾಣವಾಗಬೇಕು;
ಮುಗ್ದ ಜನರಿಗೆ
ಯೋಜನೆಗಳ
ಹೆಸರಲಿ
ಕರಭಾರವ ಹೊರಿಸಿ
ಹಿಂಸಿಸದ
ಮನವಾಗಬೇಕು;
ಪ್ರಜೆಗಳ ಅಶೋತ್ತರಗಳಿಗೆ
ಬರೀ ಕಿವಿಯಾಗದೇ
ಸಂಕಟಗಳ
ಪರಿಹರಿಸೋ
ಹೃನ್ಮನವಾಗಬೇಕು;
———————————————————————————————
ಕಾಡಜ್ಜಿ ಮಂಜುನಾಥ

ತುಂಬಾ ಅದ್ಭುತವಾದ ಕವಿತೆ ಸಾರ್