ಹನಿಬಿಂದು ಅವರ ಭಾವಗೀತೆ – ಭಾರತಿಗೆ

ಬಾಗಿ ನಮಿಸುವೆ ಭವ್ಯ ಮಾತೆಗೆ
ಭರತ ಭೂಮಿಯ ಒಡತಿಗೆ
ಭಾವ ತುಂಬಿದ ಹೃದಯ ಪದಗಳ
ಮುಡಿಸಿ ಆರತಿ ದೇವಿಗೆ//

ಭಕ್ತಿ ಯುಕ್ತಿ ಶಕ್ತಿ ಬೆರೆಸುತ
ವಿಶ್ವ ಶಾಂತಿಯ ಬೇಡುವೆ
ಭವ್ಯ ಮನದಿ ಬೇನೆ ಕಳೆಯಲು
ನಿತ್ಯ ಭಜಿಸಿ ಹಾಡುವೆ//

ಜಾತಿ ನೀತಿ ಮರೆತು ಬಾಳಲು
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ನೀತಿ ನಿರ್ಮಲವಾಗಿ ಸೂಕ್ತಿಯು
ಸರ್ವರೆದೆಯನು ಮುಟ್ಟಲಿ
ಕೀರ್ತಿ ಜಗದ ಮೂಲೆ ಮೂಲೆಗೂ
ಸರ್ವ ಸುಖವೂ ಹಬ್ಬಲಿ//

Leave a Reply

Back To Top