ಕಾವ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
“ಜಗತ್ತಿಗೊಬ್ಬ ಮಹಾತ್ಮ”

ಜಗತಿಗೊಬ್ಬ ಮಹಾತ್ಮ ಅವತರಿಸಿದ
ಹುಟ್ಟಿದ ದಿನ ಕವಿತೆ
ಹುಟ್ಟಿದ ದಿನ
ಹುಟ್ಟಿದಹಬ್ಬ ಜನ್ಮದಿನ
ಜನಿಸಿದ ದಿವಸ..
ಎಷ್ಟೊಂದು ಬಗೆ ಬಗೆ
ಹುಟ್ಟಿದ ಸಂಭ್ರಮ
ಒಂದುಮನೆಯಲಿ
ಕೇಕು ಮತ್ತೊಂದರಲ್ಲಿ
ಪಾಯಸ ಇನ್ನೂ ಒಂದರಲ್ಲಿ
ಜಾಮೂನು ಕೇಸರಿಭಾತು
ದೊಡ್ಡವರಿಗೆ ಯಾವುದು ಇಷ್ಟಬೋ
ಮಕ್ಕಳಿಗೂ ಅದೇ ಭೋ ಯಿಷ್ಟ
ವೆಜ್ಜು ನಾನ್ ವೆಜ್ ಊಟ ಬಡವನ
ಮಕ್ಕಳಿಗೆ ದರ್ಶಿನಿಯ ಮಸಾಲೆ ದೋಶೆ
ಉಳ್ಳವನ ಮಗು ಫೈವ್ ಸ್ಟಾರ್ ಹೋಟೆಲಿಗೆ
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
ಸೂಟು ಜರತಾರಿ ಲಂಗ ರೇಷ್ಮೆ
ಸೀರೆ ಸಿಲ್ಕು ಪಂಚೆ ಮೈಸೂರು ಪೇಟ
ಹಾರ ತುರಾಯಿ ಶಾಮಿಯಾನ ಛತ್ರಿ
ಬಾಲ ಬಡುಕ ಪುಡಿ ರಾಜಕಾರಣಿ
ಮರಿ ಲೀಡರ್ ಬೆಳೆದವನು
ಬೆಳೆಯುತ್ತಿರುವವನು ಎಲ್ಲರಿಗೂ
ಹುಟ್ಟಿದ ಹಬ್ಬ ಆಚರಣೆ..
ವೈವಿಧ್ಯ, ಸಂಬಂಧ ಅಸಂಬಂಧ
ಅನುಬಂಧ.. ಅನೋರಣಿಯ
ಆತ್ಮೀಯ ಅನಾತ್ಮೀಯ
ಶತ್ರು ದ್ವೇಷಿ ಎಲ್ಲರನ್ನೂ ಬೆಸೆವ ಹಬ್ಬ.
ಹುಟ್ಟಿದ ದಿನ ಕವಿತೆ ಹುಟ್ಟಿದ ದಿನ
ಪ್ರೀತಿ ವಿಶ್ವಾಸ ಬೆಳೆದು ಬೆಸೆವ ದಿನ
ಹುಟ್ಟಿದಹಬ್ಬ ಜನ್ಮದಿನ ಜನಿಸಿದ ದಿವಸ..
ಎಷ್ಟೊಂದು ಬಗೆ ಬಗೆ
ಹುಟ್ಟಿದ ಸಂಭ್ರಮ
ಹುಟ್ಟಬಾರದ ಹುಳು ಹುಟ್ಟಿದರೂ
ಹೆತ್ತವರು ಪಡುವ ಸಂಭ್ರಮ
ಆಗದಿರಲಿ ಭ್ರಮ ನಿರಸನ
ತುಂಬು ಪುಟದ ಜಾಹಿರಾತು
ಅಧಿಕಾರದಲ್ಲಿರುವವರೆಗೆ ಭೊ ಪರಾಕು
ಕುರ್ಚಿ ಬಿಟ್ಟೊಡನೆ ಇಲ್ಲ ಕಾಸಿನ ಕಿಮ್ಮತ್ತು
ಹಿಂಬಾಲಕ ಮುಂಬಾಲಕ ಮಾಯವೋ ಮಾಯಾ
ಮರೆವರು ಜನಕ ಮಹಾರಾಜನ
ಮತ್ತೊಬ್ಬ ಸಿಕ್ಕಿರುವನೋ ಇವನ ಜಾಗಕ್ಕೆ
ಬೆಳೆಯುತ್ತಾ ಬೆಳೆಯುತ್ತಾ
ಬೆಳೆಯುತ್ತಾ ಪರಿಭ್ರಮ
ಹುಳ ಹುಟ್ಟದಿದ್ದರೇನು ನಷ್ಟ
ಆಯಿತೇ ಹೆಣ ಭಾರ ಭೂಮಿಗೆ
ಸಾಕು ಸಾಕು ಭೂತಾಯಿ ಒಮ್ಮೆ
ಮೈ ಕೊಡವಿ ಧೂಳೀಪಟ ಮಾಡು
ಒಲ್ಲದ ಕ್ರಿಮಿಗಳ ಮೆದುಳಿಲ್ಲದ
ಬೇಕಿಲ್ಲದ ಶನಿ ಸಂತಾನಗಳ
ಭೂಮಿಗೆ ಹೊರೆಯಾಗುವ
ದಂಡಪಿಂಡಗಳ ಪಾರಾಸೈಟುಗಳ
ದೇಶ ಭಂಜಕ ಮಹಾಪ್ರಭುಗಳ
ಇರಲಿ ದೇಶ ಸಭ್ಯರಿಗೆ ಸದ್ಗೃಹಸ್ಥರಿಗೆ ಮಾತ್ರ…..
ಎಚ್ ಗೋಪಾಲಕೃಷ್ಣ
