ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಬೊಗಸೆಯೊಳಗಿನ ಪ್ರೀತಿ”

ಭಾವ ಬೀಜಕ್ಕೆ ಸದ್ಭಾವದ
ಎರಕ ಹೊಯ್ಯದ ವಿಮಲದ
ಅದಿತಿ ಪ್ರೀತಿ ಅರಸುತ್ತ ಅರಸುತ್ತ .!!೧!!
ಅದೆಷ್ಟು ದೂರ ನಡೆದು ಬಂದೆ
ದಟ್ಟ ಕಾಡಾರಣ್ಯ ದಾಟಿ ನಿಂದೆ
ಗುಡ್ಡ-ಗಾಡುಗಳ ಪಯಣಿಸಿದೆ ….!!೨!!
ಹಸನ ಮನಕ್ಕೆ ಕಾಣದಾಯಿತು
ನಿರ್ಮಲ ಪ್ರೇಮದ – ಚೆಂಬೆಳಕು
ಗಾಡ ಅಂಧಕಾರ ಅರಣ್ಯದೊಳು..!!೩!!
ಹಸಿದ ಹೂಂಕರಿಸುವ ಸಿಂಹಿ-ಹುಲಿಗಳು
ಕಾಳಸರ್ಪಗಳ ಕಾಳ ಹಾವಳಿಗಳು
ಹರೆದು ತಿನ್ನುವ ನರಿಗಳ ದಾಳಿಗಳು!!೪!!
ಎನಿತು ಸಹಸ್ರಬನ ಪಯಣಿಸಿದೆ
ತಿಳಿಯದಾಯಿತು ಹುಡುಕುತ್ತಿರುವೆ
ನಿಸ್ವಾರ್ಥ ಒಲವಿನ ಹೊಂಡಕ್ಕಾಗಿ …!!೫!!
ಹುಚ್ಚ- ಅಲೆಮಾರಿ ,ಅಲೆ-ಅಲೆದು
ಹುಡುಕುತ್ತಿದೆ ,ಮರೆತು ತಾರತಮ್ಯದಿ
ಅಟ್ಟಹಾಸದಿ ಮೆರೆವ ಜಗವಿದೆಂದು..!!೬!!
ಒಂದೆಡೆ ಕೊಟ್ಟು ಮರಳಿ ಪಡೆದುಕೊಳ್ಳುವ
ಮುಳ್ಳ ಹಂದಿಗಳ ಕಾಟವಿದು- ಅಂಧರು
ನಿನ್ನೊಳವಿತಿಹರು ಎಲ್ಲೆ ದಾಟಿಹರು.!!೭!!
ಪಯಣಿಸುತ್ತಿರುವೆ ನಿಸ್ವಾರ್ಥ ನಿರ್ಮಲ
ಪ್ರೀತಿಗೆಗಾಗಿ ಕಾಣದೆ ಸೋತು ಕುಳಿತಿರೆ
ದೂರ ಕೇಳಿತು ಜುಳುಜುಳು ನಾದವು.!!೮!!
ಧುಮ್ಮಿಕ್ಕಿ ಕೆಳಗಿಳಿವ ಜಲಧಾರೆಯು
ಸಾಮಿಪ್ಯದಿ ನೋಡಲು ಸಲಿಲ ಸುಮಧುರ
ಒಲುಮೆ ಧಾರೆ ಎರೆವ ಏತವು……..!!೯!!
ಸಾಹಸದಿ ನೀರ್ರ್ರ್ಳಳಿದು ಬಾಯ್ಯಾರಿಕೆ
ಆರಿಸಲು, ದಾಹವು ತಣಿಸಲು ತೋರಿತು
ಒರತೆ- ಒಲುಮೆಯ ಕರುಣೆಯು…!!೧೦!!
ಜೀವದಾನಿ-ಬೋಗಸೆಯೊಳಗಿನ್ನಷ್ಟೇ “ನಿರ್ಮಲ”
ಪ್ರೀತಿಯು ಸಾಕಿತ್ತು ಬದುಕಿ ಉಳಿಯಲು
ಸಾಕಿತ್ತು ಬೊಗಸೆ ಅಷ್ಟೇ ಸ್ನೇಹವು…!!೧೧!!
ಬೊಗಸೆ ಅಷ್ಟೇ ಸಾಕಿತ್ತು ಪ್ರೇಮಸೌಖ್ಯ
ಸವಿತಾ ದೇಶಮುಖ

ಅಭಿಮಾನಿಯ ಅಭಿನಂದನೆಗಳು