ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್

ಅಪ್ಪಿದ ಕ್ಷಣಗಳನು ನೆನೆದು ಹಸಿಯಾಯಿತು ಮನ
ಒಪ್ಪಿದ ಹೃದಯದಿ ಕುಣಿದು ಹುಸಿಯಾಯಿತು ಮನ
ಅಪ್ಪಣೆ ಪಡೆಯದೆ ಪ್ರೀತಿಯ ಬಲೆಯನು ಎಸೆಯಿತೇ
ತಪ್ಪಿಲ್ಲದ ಖೈದಿಯಂತೆ ಮುನಿದು ಬಿಸಿಯಾಯಿತು ಮನ
ಸಪ್ಪಿನ ಮೋರೆ ಮಾಡಲು ತನುವಿದು ಕೂಡದಾದೀತು
ಕಪ್ಪುಮೋಡದ ತೆರದಿ ಇಳಿದು ಕ್ಲೇಶಿಯಾಯಿತು ಮನ
ಸಿಪ್ಪೆಯ ತಗೆದಿಟ್ಟ ಹಣ್ಣಂತೆ ಅಂತರಂಗ ಬಿಚ್ಚಿಟ್ಟಿರುವೆ
ಹೆಪ್ಪಿಟ್ಟ ಹಾಲಂತೆ ಒಡೆದು ಘಾಸಿಯಾಯಿತು ಮನ
ತಿಪ್ಪೆಯ ಮೇಲಿನ ನೊಣವು ಅಲೆದಂತಾದೀತು ಅಭಿನವ
ರಪ್ಪನೆ ಅಭಿನವಗೆ ಮಣಿದು ದಾಸಿಯಾಯಿತು ಮನ
—————————————————–
ಶಂಕರಾನಂದ ಹೆಬ್ಬಾಳ
