ಸವಿತಾ ದೇಶಮುಖ ಅವರ ಕವಿತೆ-ಕೆಂಪಾಯಿತು ಬಾವುಟ

ಭಾರತಾಂಬೆ ನಿನ್ನ ಭಕ್ತಿ- ಕಣಜ
ಕಾಂತಾರದಿ ಸಿಂಚನಗೊಂಡ ವೀರರು
ಪಣತೊಟ್ಟು ನಿಂತ ಶೌರ್ಯಧೀರರು
ಬಲಾಢ್ಯ ತೋಳಿನ ಧೀಮಂತರವರು…೧!!

ನಿನ್ನ ರಕ್ಷೆಯ ಕಂಕಣ ಕಟ್ಟಿ ನಿಂದವರು
ನ್ನಿಮೇಲಣ ಕಪಿ ದೃಷ್ಟಿ ಹರಸಿದವರ
ಹಿಂಡಿ, ಚಂಡಾಡುವ ಗಂಡುಗಲಿಗಳವರು
ಸಾಹಸ ಮೆರೆಯುವ ಧೈರ್ಯವಂತರು….!೨!!

ಬಿಟ್ಟು ಮನೆ -ಮನೆತನ ಬಲು ದೂರ
ಮಕ್ಕಳು -ಬಳಗ ಮರೆತು ನಿಂತವರು

ನಿನ್ನ ರಕ್ಷೆ ಸನ್ಮಾನಕೆ ಬದ್ಧ ಪುಣ್ಯ ಸುತರರು
ನಿನ್ನ ಸಂರಕ್ಷಣೆ – ಆದರ್ಶ ರಂಗರೇರಿದವರ..!!೩!!

ನಿನ್ನ ನೋವಿನ ಸುಳಿ ಸಿಕ್ಕರೆ – ಮರೆತು
ಪ್ರಾಣ ಹಂಗ,ಹರಿಸುವರು ರಕ್ತದ ಓಕುಳಿಯು
ಅವರ‌ ಎದೆಯ ತುಂಬಾ ನಿನ್ನದೇ ಜೋರು
ನೀನೇ ಅವರ ದೇಹದ ಹರಣ !!೪!!

ನೀನೆ ಅವರ ಸ್ವರ್ಗ -ಹಬ್ಬದ ಔತಣವು
ನಿನ್ನ ನಗು ಪ್ರಮಥ ತೃಪ್ತಿಯು
ನರ -ನಾಡಿಯಲ್ಲಿ ನಿನ್ನದೇ ಸ್ಪೂರ್ತಿ
ತಿರು ತಿರುಗಿ ನಿನ್ನ ದಿವ್ಯ ಅಕ್ಷವೇ ತಾಣವು!!೫!!

ನಿನಗಾಗಿ ಹೋರಾಡುವ ಪಥದ
ಸಮರ -ಸಂಗ್ರಾಮ ಸುಮ್ಮಾನ
ಚಳಿ,ಗಾಳಿ ,ಮಳಿ ,ಹಿಮದಲ್ಲಿ
ಎದೆ ಒಡ್ಡಿ ನಿಲ್ಲುವರು -ಸಹಜತೆಯಲಿ!!೬!!

ದೇಶದ ಕಣ ಕಣದ ಸೋಪಾನ
ಜೀವದ ಕೊನೆಯ ರಕ್ತದ ಹನಿ ಹನಿ
ನಿನಗಾಗಿ ಆಹುತಿ ಗೈಯುವದೇ
ಚೇತನರ ಜನನ -ತೃಪ್ತಿ ಚಿತ್ತ…..!!೭!!

ದೇಶದ್ರೋಹಿ ಹುಚ್ಚು ನಾಯಿಗಳ ಆರ್ಭಟಕ್ಕೆ ಸಿಂಹಗಳ ಬಲೆಯಾದ “ಫುಲ್ವಾಮಾ‌” ಕಾಂಡಕೆ
ಘಾಸಿ ಗೊಂಡಿದೆ ಭಾರತಾಂಬೆ ಎದೆ
-ರಕ್ತ ರಂಜಿತವಾಗಿ ,ಬಾವುಟ ಕೆಂಪೇರಿದೆ…!!೮!!

“ಯೋಧರ ಬಲಿದಾನದ ದಿವಿಗೆ
ಒಳ ಹೊರಗೆ ಪ್ರಜ್ವಲಿಸಿ ಬೆಳಗುತಿದೆ “


One thought on “ಸವಿತಾ ದೇಶಮುಖ ಅವರ ಕವಿತೆ-ಕೆಂಪಾಯಿತು ಬಾವುಟ

Leave a Reply

Back To Top