ಪುಸ್ತಕ ಸಂಗಾತಿ
“ಕಲೆಯ ಅಭಿಮಾನದಿಂದ ಲೇಖನಿಯಲ್ಲಿ”
ಹೆಚ್.ಎಸ್.ಪ್ರತಿಮಾ ಹಾಸನ್.


ಒಲವಿನಲಿ ಸ್ನೇಹವನು ಮಾಡುತಲಿ ನಡೆಯುತಿರೆ
ಸಲುಗೆಯನು ನೀಡುತಲಿ ಕಾರ್ಯದಲಿಯೆ
ಮಲಿನತೆಯ ತೋರದಲೆ ಮನವದವು ಶುದ್ಧವಿರೆ
ಕಲಿಸುತಲಿ ಸಾಗುವರು
ಲಕ್ಷ್ಮಿ ದೇವಿ……
ನಮಗೆ ಮಾರ್ಗದರ್ಶನ ನೀಡುವ ಬಹುಮುಖ ಪ್ರತಿಭೆಯ ಗುರುಗಳು ಶ್ರೀ ಗೊರೂರು ಅನಂತರಾಜುರವರು ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸುತ್ತಾ ಹೊಸದಾಗಿ ಬಂದ ಯುವ ಪ್ರತಿಭೆಗಳಿಗೆ ವೇದಿಕೆಗಳನ್ನು ನೀಡುವುದರಲ್ಲಿ ಬಹಳಷ್ಟು ಯಶಸ್ಸು ಕಂಡವರು. ಸತತವಾಗಿ ಸಾಹಿತ್ಯ ಲೋಕದಲ್ಲಿ ಮಿಂದು ಎಲ್ಲರೊಂದಿಗೂ ಸ್ನೇಹಿತರಾಗಿ ಪ್ರೀತಿ ವಿಶ್ವಾಸದಲ್ಲಿ ಬರಹ ಲೋಕದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದವರು. ಕೆಲಸ ಕಾರ್ಯಗಳಲ್ಲಿ ಸಲುಗೆಯನ್ನು ನೀಡುತ ಯಾವುದರಲ್ಲೂ ಮಲಿನತೆಯನ್ನು ತೋರದೆ ಮನವನ್ನು ಶುದ್ಧವಾಗಿಟ್ಟುಕೊಂಡವರು. ಕಲಿಕೆಯನ್ನು ಕಲಿಯದವರಿಗೆ, ಕಲಿಸುತ ಆಗದು ಎಂದು ಹೇಳಬಾರದು ಕೆಲಸ ಆಗುವುದು ಎಂದು ಮಾಡುತ್ತಿರಬೇಕು ಎಂದು ತಿಳಿಸಿದವರು.
ಇಂತಹ ಬಹುಮುಖ ಪ್ರತಿಭೆಯ ಗೊರೂರು ಅನಂತರಾಜು ರವರ ಕಲೆ..ಸೆಲೆ ಕೃತಿಯ ಬಗ್ಗೆ ಬರೆಯುವುದು ನನಗೆ ಸಂತಸದ ವಿಚಾರವಾಗಿದೆ
ರಂಗಭೂಮಿ ಮಾತ್ರವಲ್ಲದೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಿನನಿತ್ಯದಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ, ಬರವಣಿಗೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಗುತ್ತಿರುವುದು ನಮಗೆಲ್ಲ ಪ್ರೇರಣೆಯ ವಿಚಾರ.
ಲೆಕ್ಕವಿಲ್ಲದಷ್ಟು ಸನ್ಮಾನ ಪ್ರಶಸ್ತಿಗಳನ್ನು ಪಡೆದು ಯಾವುದೇ ಜಂಬವಿಲ್ಲದೆ ನಮ್ಮಂತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರಲ್ಲಿ ಮೊದಲಿಗರು
ಇವರ ಕೃತಿ “ಕಲೆ..ಸೆಲೆ” ಯಲ್ಲಿ
ರಂಗಭೂಮಿಯ ಕ್ರಿಯಶೀಲ ವ್ಯಕ್ತಿತ್ವ ಗೊರೂರು ಅನಂತರಾಜು ಇದು
ಕೃತಿಕಾರರ ಪರಿಚಯ ಬರಹ. ಕೃತಿಯ 40 ಲೇಖನಗಳಲ್ಲಿ ನಾಟಕ, ಚಿತ್ರಕಲೆ, ನೃತ್ಯ ಸಂಗೀತ ಸಾಧಕರ ಪರಿಚಯ ಲೇಖನಗಳು ಕಲೆಯ ಸೆಳತಕ್ಕೆ ಒಳಗಾಗಿ ಆ ಪ್ರಕಾರದಲ್ಲಿ ತಮ್ಮ ಕಲಾ ಕೌಶಲ್ಯತೆ ತೋರಿ ಗುರುತಿಸಿಕೊಂಡವರದು. ಇಲ್ಲಿ ಇತ್ತೀಚೆಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದ ಮಹನೀಯರು ಒಳಗೊಂಡಿದ್ದಾರೆ.
ಪ್ರದರ್ಶಿತ ನಾಟಕಗಳನ್ನು ವೀಕ್ಷಿಸಿ ಬರೆದ
ವಿಮರ್ಶೆ ಲೇಖನಗಳು, ನಟರು, ಚಿತ್ರ ಕಲಾವಿದರು, ಗಾಯಕರು ಉತ್ತಮ ಚಲನಚಿತ್ರಗಳು ಮತ್ತು ನೃತ್ಯ ಹೀಗೆ ಹಲವಾರು ಸಾಮಾಜಿಕ,ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡ’ ಕಲಾ ವೈವಿಧ್ಯತೆಯ ಕೃತಿ ಇದು.
ಮೊದಲನೇ ನಾಟಕ ವಿಮರ್ಶೆ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕಗಳು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾಗಿವೆ. ಲೇಖಕರು ಈ ನಾಟಕಗಳನ್ನು ನೋಡಿ ಬರೆದಿದ್ದು ಪೂರ್ಣ ಮಾಹಿತಿ ಒಳಗೊಂಡ ಈ ಲೇಖನ ಉತ್ತಮ ಪ್ರಯೋಗ.
‘ಶಿಶುನಾಳ ಷರೀಫರ ಜೀವನ ಗಾಥೆ’
ಎರಡು ನಾಟಕಗಳ ಪ್ರದರ್ಶನ ಸುಲಲಿತವಾಗಿ ಓದುಗರ ಮನ ಮುಟ್ಟುವಂತೆ ವಿಚಾರಗಳನ್ನು ವ್ಯಕ್ತಪಡಿಸುವ ಕಲೆಯು ಸರಳತೆಯಿಂದ ಕೂಡಿ ಅರ್ಥಪೂರ್ಣವಾಗಿದೆ. ಹಾಸನದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮಂಜುನಾಥ ಬೆಳಕೆರೆ ರಚಿತ ಶರೀಫ ನಾಟಕ ಪ್ರದರ್ಶಿಸಿದರು. ಇಲ್ಲಿ ನಾಟಕದ ವಿಚಾರ ಸಾರವತ್ತಾಗಿ ತಿಳಿಸಿದ್ದಾರೆ.
ನಂತರದ ಐತಿಹಾಸಿಕ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ ನಾಟಕಗಳಲ್ಲಿ ಐತಿಹಾಸಿಕ ಹಿನ್ನೋಟ ವಿಭಿನ್ನ ಪ್ರಯೋಗ ಬಹಳ ಸೊಗಸಾಗಿ ಅಲ್ಲಿಯೇ ಕುಳಿತಿದ್ದೇವೆನೋ ಎಂಬಂತೆ ಭಾಸವಾಗಿ ವಿಚಾರ ವಿಷಯ ಮನದಟ್ಟಾಗುತ್ತವೆ. ಕೇರಿ ಹಾಡು ನಾಟಕ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಾಸನ ಹೇಮಾವತಿ ನಗರದ ಎಲೈಟ್ ಶಾಲೆಯ ರಂಗಮಂದಿರದಲ್ಲಿ ಚನ್ನರಾಯಪಟ್ಟಣ ತಾ. ದಿಂಡಗೂರಿನ ಮಾತೆ ಸಾವಿತ್ರಿ ಪುಲೆ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಕಲಾವಿದರು ಕೆ ಚಂದ್ರಶೇಖರ್ ರಚನೆ ನಿರ್ದೇಶನದಲ್ಲಿ ಪ್ರದರ್ಶಿಸಿ ಸರಳ ರಂಗ ಸಜ್ಜಿಕೆಯಲ್ಲಿ ಗ್ರಾಮ್ಯ ಬದುಕಿನ ನೈಜ ಚಿತ್ರಣ ಅನಾವರಣಗೊ೦ಡಿದೆ. ಹೀಗೆಯೇ ನಾಟಕಗಳು ರಂಗಭೂಮಿಯ ಮೇಲೆ ಯಾವ ರೀತಿ ವೈಭವಿಕರಿಸಿವೆ ಎಂಬುದನ್ನು ಪ್ರದರ್ಶನ ವಿವರಣೆಯಲ್ಲಿ ಕಾಣಬಹುದಾಗಿದೆ. ಮಹಾಭಾರತ ಪದ್ಮವ್ಯೂಹ ನಾಟಕ ರಂಗಾಯಣ ನಾಟಕ ವಿ ದ ಪೀಪಲ್ ಆಫ್ ಇಂಡಿಯಾ, ದಕ್ಷ ಕಥಾ ದೇವಿ ಕಾವ್ಯ, ಬಾಡಿದ ಬದುಕು ನಾಟಕ ಮತ್ತು ನಾಟಕಕಾರ ಗ್ಯಾರಂಟಿ ರಾಮಣ್ಣರ ಪರಿಚಯ ಪ್ರಚಂಡ ರಾವಣ ನಾಟಕ ಮತ್ತು ಪಾತ್ರಧಾರಿ ಜಗದೀಶ್ ರಾಮಘಟ್ಟ ಪರಿಚಯ, ಪೌರಾಣಿಕ ನಾಟಕಗಳು ರಂಗಗೀತೆಗಳೇ ರ್ಮೆಲುಗೈ! ಆನಂತರದಲ್ಲಿ ದಿಬ್ಬೂರು ರಮೇಶ್ ಅವರ ಇವನಾರವ ನಾಟಕ ವಿಮರ್ಶೆ, ಅಶೋಕನ ಯುದ್ಧ ಮಾತಿನಲ್ಲಿ ಗೆದ್ದ ಬಾಲೆ, ದೇವಿ ಮಹಾತ್ಮೆ ನಾಟಕ ಗೋವಿಂದಗೌಡರು, ಹಾಡು ನಾಟಕ ಎರಡಕ್ಕೂ ಸೈ ರಾಣಿ ಚರಾಶ್ರೀ.. ಹೀಗೆ ನಾಟಕ ಮತ್ತು ಕಲಾವಿದರ ವ್ಯಕ್ತಿ ಪರಿಚಯಗಳನ್ನು ನಾಟಕಗಳ ಜೊತೆಗೆ ಕಾಣಬಹುದಾಗಿದೆ. ಆನಂತರದಲ್ಲಿ ಕೆಲವು ಪ್ರಶಸ್ತಿ ವಿಜೇತ ಚಲನಚಿತ್ರಗಳ ಬಗ್ಗೆಯೂ ಸೊಗಸಾಗಿ ವಿಚಾರಗಳು ಓದುಗರ ಕಣ್ಮುಂದೆ ಬರುವಂತೆ ಬರೆದಿದ್ದಾರೆ. ನಾ ನೋಡಿದ ಶ್ರೀಮಂತ ಚಲನಚಿತ್ರ, ಬ್ರಹ್ಮ ಕಮಲ ಚಲನಚಿತ್ರ, ಪ್ರಮುಖವಾಗಿ ವಿಶ್ಲೇಷಿಸಲ್ಪಟ್ಟಿವೆ. ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಮಕ್ಕಳ ನೃತ್ಯ ಪ್ರದರ್ಶನ, ನಾಟ್ಯ ಪ್ರತಿಭೆ ಸುಬ್ರತಾ ಪಿ. ಚನ್ನರಾಯಪಟ್ಟಣ, ಬಾಲ ಪ್ರತಿಭೆ ಶೃಜನ್ಯ ಜೆ. ಕೋಟ್ಯಾನ್, ಭರತನಾಟ್ಯ ಪ್ರವೀಣೆ ಯೋಗಿತಾ ಪಿ ಪಾಟೀಲ್ ಇವು ನೃತ್ಯ ಪ್ರಕಾರದವು. ತತ್ವಪದ ಗಾಯಕರು ಜೆ.ಪಿ. ಶಿವನಂಜೇಗೌಡರು, ತತ್ವಪದ ಗಾಯಕ ಯೋಗೇಂದ್ರ ದುದ್ದ ಇವರು ಜನಪದ ಗಾಯಕರು ಮತ್ತು ಸಾಧಕರು ಭಾವಚಿತ್ರ ರಚನೆಯ ಬಾಬುರಾವ್ ನಡೋಣಿ ನಾಡಿನ ಅದ್ಭುತ ಚಿತ್ರ ಕಲಾವಿದರು. ಚಿತ್ರ ಕಲಾವಿದೆಯರು ಪ್ರೀತಿ ಹೆಚ್ ಪಿ , ಚಂದ್ರಪ್ರಭಾ, ಮಂಜುಳ,ವಿಮಲ ಎಸ್.ಕೆ. ನೇಚರ್ ಆರ್ಟಿಸ್ಟ್ ಮುರಳಿ ಎಸ್ ಕೆ ಭರವಸೆಯ ಚಿತ್ರಕಲಾವಿದ ಬಿ ಎಸ್ ನಂದನ ಭರವಸೆಯ ಯುವ ಪ್ರತಿಭೆಗಳು. ಜಾನಪದ ಕಲಾವಿದ ಶಿವಣ್ಣ ಬಿರಾದಾರ, ಕೊಳಲು ವಾದನ ಆರ್ ಬಿ ಪುಟ್ಟೇಗೌಡರು, ಗಮಕಿ ಸಿ.ಪಿ. ವಿದ್ಯಾಶಂಕರ, ಜನಪದ ಗಾಯಕ ಕುಮಾರ್ ಕಟ್ಟೆ ಬೆಳಗುಳಿ, ಇವರು ತಮ್ಮ ತಮ್ಮ ಕಲಾಕ್ಷೇತ್ರದ ಸಾಧಕರೇ ಸೈ. ಅಬ್ಬಾ! ಅದು ಅದ್ಭುತ ಗಾಲಿ ನೃತ್ಯ ಲೇಖನ ನಿಜಕ್ಕೂ ಅದ್ಭುತವೇ! ರಂಗ ನಿರ್ದೇಶಕ ಗಾಡೇನಹಳ್ಳಿ ವೀರಭದ್ರಾಚಾರ್, ಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ, ಸಾಹಿತ್ಯ ಪರಿಚರಿಕೆ ಕನ್ನಡ ಸೇವೆ ಸಿಸಿರಾ ಇವು
ಕಲೆ ಸಂಸ್ಕೃತಿ ಉಳಿಸಬಲ್ಲವು.
ಕಲಾ ಸಾಧಕರ ಬಗ್ಗೆ, ನಾಟಕಗಳ ಬಗ್ಗೆ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ, ಎಲೆ ಮರೆಕಾಯಿಯಾಗಿ ಉಳಿದ ಕಲಾವಿದರ ವಿಚಾರಗಳನ್ನು ಒಳಗೊಂಡ ಕೃತಿ ಕಲೆ ಸೆಲೆ ಕಲಾವಿದರನ್ನು ಬೆಳಕಿಗೆ ತರುವಲ್ಲಿ ಸಾಫಲ್ಯ ಸಾಧಿಸಿದೆ.
ಹೆಚ್.ಎಸ್.ಪ್ರತಿಮಾ ಹಾಸನ್.

Pratima mam pl hand over a copy to me pl…Excellent. A writing needed by our society for future students in Art seeking a role model…
Pl keep writing on him on his various Facets of personality…Good…