ಅನುವಾದ ಸಂಗಾತಿ
́ನದಿಯ ಭೀತಿ….́
ಮೂಲ: ಖಲೀಲ್ ಗಿಬ್ರಾನ್
ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.



ನದಿಗೆ-ಸಾಗರದಲ್ಲಿ ಕಳೆದುಹೋಗುವ ಭೀತಿ !
ಗಿರಿ-ಶಿಖರಗಳಿಂದಿಳಿದು, ಬೆಟ್ಟ-ಗುಡ್ಡಗಳನ್ನು ಬಳಸಿ
ಬಳಕುತ್ತ ಊರು-ಕೇರಿಗಳನ್ನು ದಾಟಿ,
ಸಾಗರದೆದುರು ನಿಂತಾಗ ಕಂಡಿದ್ದು :
ಪಾರವಿಲ್ಲದ ಅಪಾರ ಜಲರಾಶಿ !
ಕಡಲೊಡಲ ಸೇರಿದರೆ ನದಿಗೆ ಶಾಶ್ವತವಾಗಿ ಕಳೆದುಹೋಗುವ ಭೀತಿ!
ಆದರೆ ಆಯ್ಕೆಗಳಿಲ್ಲ.
ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !
ನದಿಗೆ ಮುನ್ನಡೆಯಲೇಬೇಕು
ಸಾಗರವನ್ನು ಸೇರಲೇಬೇಕು.
ನದಿ ಸಾಗರವನ್ನು ಸೇರಿದಾಗ-ಭಯ ಮಾಯ !
ಇದು, ನದಿ ಸಾಗರದಲ್ಲಿ ಕಳೆದುಹೋಗುವ ಕ್ರಿಯೆಯಲ್ಲ ;
ಬದಲಾಗಿ, ನದಿಯೇ ಸಾಗರವಾಗುವ ಪರಿ !!!
…..
ಮೂಲ: ಖಲೀಲ್ ಗಿಬ್ರಾನ್ .
ಕನ್ನಡಕ್ಕೆ :ರಾಮಚಂದ್ರ ಎಲ್.ಕನಕ.
Wow,Super,Very Meaningful..