ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ
ಅಭೂತ ಸಂಗಮ

ನೀನೇ ನನ್ನ ಜೀವದ ಹಣತೆ
ಒಲವ ಹನಿಸಿ ಹರಡಿರುವೆ ಪ್ರಖರತೆ
ನಿನ್ನದೇ ಪ್ರತಿಬಿಂಬ ನನ್ನೆದೆಯ ತುಂಬಾ
ಎಂದೂ ಮಾಸದ ಬೆಳಕಿನ ಬಿಂಬ
ನದ ನದಿಗಳ ಅಭೂತ ಸಂಗಮ
ಅಗಮ್ಯ ಅಪ್ರತಿಮ ಈ ನಿನ್ನ ಪ್ರೇಮ
ಕಡಲ ತಡಿಯಲಿ ಅಡಗಿದ ಸ್ವಾತಿ ಮುತ್ತು
ಮೆರಗು ನೀಡುತ ಬೆರಗು ಮೂಡಿಸಿರುವೆ ನೀ ನನ್ನ ಸ್ವತ್ತು
ನಿನ್ನೊಲವೇ ಶಿಶಿರ ವಸಂತಗಾನ
ಅಕ್ಕರೆಯ ಅನುಭೂತಿ ಅತಿ ಮಧುರ ಯಾನ
ನೀ ಜೊತೆಯಿರೆ ನಾಕ ನರಕ ಸಮಾನ
ನಿರಂತರ ಸಾಗಲಿ ನಮ್ಮ ಪ್ರೇಮದಭಿಯಾನ
ಒಲವ ಹನಿ ತುಂಬಿದ ಲೇಖನಿ ಲೇಖಿಸಿದ ಬರವಣಿಗೆ ನಿನ್ನದೇ ಮೆರವಣಿಗೆ
ಆಗಸದ ಚಂದ್ರಮ ಸಿಕ್ಕಂತೆ ಕೈಗೆ
ನೀನಾದೆ ಪ್ರಿಯತಮ ಈ ನನ್ನ ಬಾಳ್ಗೆ
ಶೋಭಾ ಮಲ್ಲಿಕಾರ್ಜುನ್

ಸೂಪರ್