ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ಅವಕಾಶ

ಅವಕಾಶ,
ಕಿಂಡಿಯಲಿ ತೂರಿ
ಬರುವ ಬೆಳಕು
ಕನ್ನಡಿಯ ಹಿಡಿದು
ನೂರಾಗಿಸಿದರೆ ಬದುಕು.
ಶಶಿ ಪ್ರತಿಫಲಿಸಿ
ದಿನಕರನ ಬೆಳಕು
ದಿಗಂತದ ಕೊನೆಗೂ
ಅವನ ಹೊಳಪು
ಬೆಳದಿಂಗಳ ಬಿಳುಪು.
ಕಾಲ ಸರಿದಂತೆ
ಕರಗುವ ಬೆಳಕು
ಕಣ್ಣರಳಿಸಿ ನೀನು
ನಿನ್ನ ದಾರಿಗಳ
ಬಿಡದೇ ಹುಡುಕು.
ಬರುವುದೇ ಮತ್ತೆ
ಹೊಂಬೆಳಕು?
ಮರೆಯಾದರೆ ಉಳಿವುದು
ಬರಿಯ ಮುಸುಕು!!
ನಿರಂಜನ ಕೆ ನಾಯಕ
