ಕಾವ್ಯ ಸಂಗಾತಿ
ಮಮ್ತಾ ಮಲ್ಹಾರ
ಮುಳ್ಳು ಹೂವಾಗಿ

ನಿರಂತರ ಹೊರಳಿನ ತಿರುಹು ಗಕ್ಕನೆ ನಿಂತಿತ್ತು
ಕತ್ತಿಯ ಮೊನೆ ತುಕ್ಕು ಹಿಡಿದಿತ್ತು
ಮದ್ದಿನ ಪಟಾಕಿ ಹುಸಿಯಾಗಿತ್ತು
ಮಳೆ ಬೆವರಿನಿಂದ ತೊಯ್ಯದಿತ್ತು
ಮುಳ್ಳು ಹೂವಾಗಿ ದೇವರ ಮುಡಿಗೇರಿತ್ತು
ಕೆರೆ ಭಾವಿ ಚಿತ್ರದಲ್ಲಿ ಕಂಡಿತ್ತು
ಉಸಿರು ಪಾತಾಳಕ್ಕೆ ಎರಿತ್ತು
ಪಿಶಾಚಿ ದೇವರ ಭಕ್ತನಾಗಿತ್ತು
ಮರಳು ಸಿದ್ದಾ ನೀನು ಸ್ಮಶಾನದ ಗೂಬೆಯಾಗಿ ವಿಚಲಿತನಾಗಿದ್ದೆ……….

ಮಮ್ತಾ ಮಲ್ಹಾರ
ಅರ್ಥಪೂರ್ಣ ಕಾವ್ಯ ಅಕ್ಕ
ಮಮ್ತಕ್ಕ, ‘ಮುಳ್ಳು ಹೂವಾಗಿ’ ಕವನ ಹೆಸರಿಗೆ ಸರಿಯಾಗಿಯೇ ಇದೆ.
ವಾಣಿ ಭಟ್
Very Nice Poem
Wow it looks like
Vachana