ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಮಹಾಭಾರತ-
ಕೆಲವೆ ಸಾಲುಗಳಲ್ಲಿ.

ಬರೆದ ಗಣಪ, ಭಾರತ ಕಥೆಯ, ಅಮಿತ ಸಂಭ್ರಮದಿ.
ವೇದ ವ್ಯಾಸ ಮುನೀಂದ್ರ ನುಡಿಯೆ ಅಮಿತ ಭರದಿ.
ಕರಿಮುಖದವನು ಬರೆದ ಕಥೆಯ,
ಕೇಳೋ ಜನಮೇಜಯ.
ವೈಶಂಪಾಯನ ಮುನಿವರ್ಯ ನು ಡಿಯೆ,
ವಿಶ್ಮಿತನಾದನು ಜನಮೇಜಯ.
ನೈಮಿಷಾರಣ್ಯದೊಡಲಲಿ ಕಲೆತ,
ವೇದಕರ್ಮ ನಿರತ, ಶುನಕಾದಿಗಳಿ ಗೆ,
ಸೌತಿ ಮಹಾಮುನಿ, ತಾ ಚಿತ್ತೈಸಿ ನುಡಿಯೆ,
ಆಲಿಸಿ ಕಥೆಯ, ಮಧುರಾನುಭವ ಪಡೆಯೆ.
(ಓಂ ನಾರಾಯಣಂ ನಮಸ್ಕೃತ್ವಂ,
ನರಂ ಚೈವ ನರೋತ್ತಮಂ.
ದೇವಿಂ ಸರಸ್ವತಿ ವ್ಯಾಸಂ,(ಚೈವ),
ತತೋ ಜಯ ಮುದರಯೇತ್.
ಮಹಾಭಾರತ ಪರ್ವ 1 ಅಧ್ಯಾಯ 1 ಶ್ಲೋಕ 1.)
(ಕೃಷ್ಣ, ಪಾರ್ಥ, ದೇವಿ ಸರಸ್ವತಿ, ವ್ಯಾಸ, ಇವರಿಗೆ ವಂದಿಸಿ,

ಮಹಾಭಾರತ ಅವಲೋಕಿಸೋಣ)
ಕಾಮ, ಕ್ರೋಧ, ಮದ, ಮಾತ್ಸ ರ್ಯ,
ರಾಗ,ದ್ವೇಷ, ಕಲುಷಿತ ಮನುಜ ನಂತರ್ಯ,
ಪ್ರಾಕೃತಿಜನ್ಯವೀ ಗುಣ ಸ್ವಭಾವ,
ಮಯ
ವ್ಯಾಸ ವಿರಚಿತ ಮಹಾಕಾವ್ಯ, ಜಯ.
ರಾಜ್ಯ, ಕೋಶ, ಮಾನನಿಯ ಮೇ ಲಾಸೆ,
ಮತ್ಸರದಿ ಸೋದರರ ಸೆದೆಬಡಿವ ಆಸೆ.
ಅಸಂಖ್ಯಾತ ಯೋಧರ ತಲೆಗಳಂ ತುಂಡರಿಸಿ,
ಅತಿರಥ ಮಹಾರಥರೆನಿಸಿಕೊಳ್ಳುವ ಆಸೆ.
ಜೂಜಿನ ಮೋಜು , ಕುರುಗಳ ರಿವಾ ಜು.
ಮೌಲ್ಯವುಂಟೆ, ಜೂಜಿನ ಫಲಿತಕೆ?
ಪಾಂಡವ ಜೇಷ್ಟನ, ಜೂಜಿನ ಚಟ ವು,
ನಾಂದಿಯಾಯಿತೇ ! ಕುರುಗಳ ಪತನಕೆ.
ಬೀಷ್ಮ, ದ್ರೋಣ, ಕೃಪಾಚಾರ್ಯರು,
ಧರ್ಮಾಧರ್ಮದ, ಸೂಕ್ಷ್ಮವನರಿ ಯರೆ?
ಕೃಷ್ಣೆಯ, ಮಾನಭಂಗವ ತಡೆಯ ದೆ,
ಮೌನವಂ ತಳೆದ, ನಿರ್ವೀರ್ಯ, ನಿಷ್ಕ್ರೀಯರೆ?

ಕಾಡಿನವಾಸ, ಹನ್ನೆರಡು ವರ್ಷ.
ವಿರಾಟನಗರಿಯೊಳ್ ಅಜ್ಞಾತ ವಾಸ.
ಕೃಷ್ಣ ಸಂಧಾನ ವಿಫಲತೆ ಕಾಣ ಲು,
ಯುದ್ಧ ಭೇರಿ, ಶಂಖಗಳು, ಮೊಳಗ ಳು.
ಹದಿನೆಂಟು ದಿನಗಳ ಕಾಳಗದೊಳು,
ರಕುತ, ಮಜ್ಜೆಯ ಕಾಲುವೆ ಹರಿಯ ಲು,
ಉತ್ತರಕುಮಾರನ ಹತ್ಯೆ, ಮೊದ ಲ್ಗೊಂಡು,
ದುರ್ಯೋಧನನ ಸರದಿ ಹದಿನೇಳ ರಂದು.
ಗೆದ್ದವರಾರು? ಸೋತವರೆ ಎಲ್ಲರು.
ಹದಿನೆಂಟರಂದು ಬದುಕುಳಿದವ ರಿವರು.
ಕೃಷ್ಣ, ಸಾತ್ವಿಕಿ, ಪಾಂಡವರೈವರು,
ಕೃಪಾ, ಅಶ್ವತ್ಥಾಮ , ಕೃತವರ್ಮರು.
ದ್ವೇಷ ಅಸೂಯೆಯ ಪರಿಣಾಮವಿ ದು,
ಜೀವಹಾನಿ, ಮಾನಹಾನಿ,ಸರ್ವವೂ ಹಾನಿ ,
ಪಾಂಡವರೆ ಗೆದ್ದರಾದರು, ಅವರಿಗಿ ಲ್ಲವೊ ತೃಪ್ತಿ,
ಮಹಾಪ್ರಸ್ಥಾನದೊಳು, ಅವರ ಸ ಮಾಪ್ತಿ.
ಪಿ.ವೆಂಕಟಾಚಲಯ್ಯ
.

ಅತಿ ಸರಳವಾಸಗಿ ಪದಗಳ ಜೋಡಣೆ, ಧನ್ಯವಾದಗಳು