ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಭಾವನಾ

ಕವಿಯ ನೋಡಿ
ಕವನ ಓದ ಬೇಡ
ಕವನ ಓದಿ
ಕವಿಯ ಹುಡುಕಬೇಡ
ಕಾವ್ಯ ಅದು
ಕವಿಯ ಭಾವ
ಎಲ್ಲೋ ಅಡಗಿದ
ಬಯಲು ಭಾವನಾ
ಹೂಗಳ ಪರಿಮಳ
ಹಾರುವ ದುಂಬಿ
ಮರದ ಪೊದರಿನ
ಪಕ್ಷಿ ಗಾಯನ
ಕಣ್ಣ ಕಾಗುಣಿತ
ಸನ್ನೆ ಪಿಸು ಮಾತು
ಕೈ ಕುಲುಕುವ ಕನಸು
ಬಯಕೆ ಆಲಿ೦ಗನ
ಹದ ನೆಲದಲಿ
ತುಂತುರು ಮಳೆ
ಅರಳಿ ನಿಲ್ಲುವವು
ಪದ ಭಾವ ಕವನ
———————————————————–

ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅತೀ ಸುಂದರ ಕವನ ಸರ್
ಮನದ ಭಾವಗಳ ಅಳೆಯಲು ಯಾರಿಗೂ ಸಾಧ್ಯವಿಲ್ಲದ ಮಾತು… ಕವನಗಳು ಹುಟ್ಟುತ್ತವೆ ತಮಗೆ ತಾವೇ ಯಾವ ಗೊತ್ತು ಗುರಿಯಿಲ್ಲದೆ ಎನ್ನುವ ನನ್ನ ಕವನದ ಸಾಲು ನೆನಪಾಯ್ತು