ʼಸಾವಿಲ್ಲದ ಶರಣರು ಮಾಲಿಕೆʼಮಾದರ ಚೆನ್ನಯ್ಯಡಾ.ಶಶಿಕಾಂತಪಟ್ಟಣ ರಾಮದುರ್ಗ

 ಕಾಲ-  ಹನ್ನೆರಡನೆಯ ಶತಮಾನ ಹೊಸ್ತಿಲ ಹುಣ್ಣಿಮೆ  ದಿನ ಅವರ ಜಯಂತಿ ಆಚರಿಸುವುದು ವಾಡಿಕೆ
ಜನ್ಮಸ್ಥಳ- ಶಿವಮೊಗ್ಗ ಜಿಲ್ಲೆಯ,ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದರು.

ತಂದೆ:-ಶಿವಯ್ಯ
ತಾಯಿ :-ಶಿವಗಂಗಮ್ಮ
ಪತ್ನಿ – ಗಂಗವ್ವ , ಉದುಕವ್ವ
ಕಾಯಕ- ಚಮ್ಮಾರಿಕೆ

ದೊರೆತ ವಚನಗಳು- 10
ಅಂಕಿತನಾಮ- ಕೈಯುಳಿಗತ್ತಿ ಅಡಿಗೂಂಟಕ್ಕಡಿಯಾಗಬೇಡ ಹರಿ ನಿಜತ್ಮಾರಾಮ ರಾಮನಾ.
ಐಕ್ಯಸ್ಥಲ -ಚಾಮರಾಜನಗರ ಜಿಲ್ಲೆ

 12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಬಸವಣ್ಣನವರ ಸಮಕಾಲೀನ. ಬಸವಣ್ಣ, ಚೆನ್ನಬಸವಣ್ಣ ಮೊದಲಾದ ವಚನಕಾರರು ಈತನನ್ನು ಸ್ಮರಿಸಿದ್ದಾರೆ. ಬಸವಣ್ಣ ಈತನನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ. ಮಾದಾರ ಚೆನ್ನಯ್ಯ ಮಾದಿಗ ಸಮುದಾಯಕ್ಕೆ ಸೇರಿದವನು. ಇವರನ್ನು ಆದಿಜಾಂಬವರು, ಮಾತಂಗರು, ಮಾದಿಗೌಡ, ಮಾದಿಗರು ಮುಂತಾದ ಹೆಸರುಗಳಿಂದಲೂ ಗುರುತಿಸುತ್ತಾರೆ. ಜಾತಿ ಪದ್ಧತಿಯಲ್ಲಿ ಇವರು ಅತ್ಯಂತ ತುಳಿಯಲ್ಪಟ್ಟವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಇಂದು  ಪರಿಶಿಷ್ಟ ಜಾತಿ ಎಂದು ವರ್ಗೀಕರಣ ಮಾಡಿರುತ್ತಾರೆ. ಸಾಂಪ್ರದಾಯಿಕವಾಗಿ ಇವರ ಕಸುಬು ಕೃಷಿ, ಚರ್ಮ ಹದಮಾಡುವುದು, ತಮ್ಮಟೆ, ಡೋಲು ಇತ್ಯಾದಿಗಳನ್ನು ತಯಾರಿಸುವುದು ಮಾದಿಗರು.

ಹಿನ್ನಲೆ

ರಾಜಕೀಯ ಸ್ಥಿತ್ಯಂತರದಿಂದಾಗಿ ಪಲ್ಲವರು ಆಳುತ್ತಿದ್ದ ಬಳ್ಳಿಗಾವಿಯ ಮೇಲೆ ಕಲ್ಯಾಣದ ಚಾಲುಕ್ಯರು ದಾಳಿ ಮಾಡಿದರು.ಆ ಸಂದರ್ಭದಲ್ಲಿ ಅಲ್ಲಿದ್ದ ಸಜ್ಜನರು,ಶರಣರು,ಬೇರೆ ಬೇರೆ ಕಡೆಗೆ ಉದ್ಯೋಗ ಹುಡುಕುತ್ತ ಅಲ್ಲಿಂದ ಹೊರಟರು.

ಶಿವಭಕ್ತರಾದ ಶ್ರೀ ಮಾದರ ಚನ್ನಯ್ಯ ದಂಪತಿಗಳೂ ತಮ್ಮ ಕಾಯಕ ಮತ್ತು ದಾಸೋಹಕ್ಕೆ ಸೂಕ್ತವಾದ ಶರಣರ ನಾಡು, ನೆರೆಯ ಗಡಿಪ್ರದೇಶವಾದ ಗಡಿಪ್ರದೇಶವಾದ ತಮಿಳುನಾಡಿನ ಕಂಚಿಪಟ್ಟಣಕ್ಕೆ ಹೋಗಿ ನೆಲೆಸಿದರು. ಜಾತಿಯಿಂದ ಮಾದರನಾದ ಚೆನ್ನಯ್ಯ ತಮಿಳುನಾಡಿನ ಕರಿಕಾಲ ಚೋಳರಾಜನ ಕುದುರೆಲಾಯದಲ್ಲಿ ಕೆಲಸಕ್ಕಿದ್ದ. ಹುಲ್ಲು ಕೊಯ್ಯುವುದು ಇವನ ಕಾಯಕ. ಕಾರಣಾಂತರಗಳಿಂದ ಕರಿಕಾಲ ಚೋಳರಾಜ ಮತ್ತು ಮಾದಾರ ಚೆನ್ನಯ್ಯನಿಗೆ ವೈಮನಸ್ಸು ಉಂಟಾಯಿತು. ತಮಿಳುನಾಡು ತೊರೆಯಲು ಚೆನ್ನಯ್ಯ ನಿರ್ಧರಿಸುತ್ತಾನೆ  ಕರಿಕಾಲ ಚೋಳರಾಜನಿಗೆ ತನ್ನ ತಪ್ಪಿನ ಅರಿವಾಗಿ  ಜ್ಞಾನೋದಯವಾಯಿತ್ತು.  ಕರಿಕಾಲ ಚೋಳರಾಜ ಅರಮನೆಯಿಂದ  ನೇರವಾಗಿ  ಮಾದರ ಚೆನ್ನಯ್ಯನ  ಮನೆ  ಹುಡುಕುತ್ತ ಹೊರಟನು . ರಾಜ ಪರಿವಾರವು ಆತನ್ನನು ಅನುಸರಿಸಿತು .ರಾಜ ಮತ್ತು ರಾಜಪರಿವಾರವೆ ಮಾದರ ಕೇರಿಗೆ ಬಂದದನ್ನು ಕಂಡು ಕೇರಿಯ ಜನಗಳು ಭಯಭೀತಾರಾದರು. ಚೆನ್ನಯ್ಯ ಮತ್ತು ಆತನ ಪತ್ನಿ ಏನೂ ಅಚಾತುರ್ಯ ಜರುಗಿದೆ  ಎಂದು ಕಳವಳಗೊಂಡರು . ರಾಜನ್ನು ಮಾದರ ಕೇರಿಗೆ ಬರುವಾಗ ಮಾದರ ಚೆನ್ನಯ್ಯ , ಮಾದರ ಚೆನ್ನಯ್ಯ ,ಮಾದರ ಚೆನ್ನಯ್ಯ ,ಎಂದು ಚೆನ್ನಯ್ಯನನ್ನು ಕೂಗುತ್ತಾ  ಬರುತ್ತಾನೆ. ತನ್ನ ಹೆಸರನ್ನು ಯಾರೊ ಕರಿಯುತಾರೆ ಎಂಬ ಆತಂಕದಿಂದ ಚನ್ನಯ್ಯ ಬಾಗಿಲು ತೆರಯುತ್ತಾನೆ ಕರಿಕಾಲ ಚೋಳರಾಜ  ಚನ್ನಯ್ಯನ ಕಾಲಿಗೆರಗಿದನು ತಬ್ಬಿಬಾದ ಚೆನ್ನಯ್ಯ  ಏನು  ಮಾಡಿತಿರುವೆ ರಾಜರೆ, ನಾನುನೀಮ್ಮ ಸೇವಕ ಮೇಲಾಗಿ ಕೆಳವರ್ಗದವನು ನೀವು ಶ್ರೇಷ್ಠ ಕುಲದವರು ನನ್ನ  ಕಾಲಿಗೆ ಬಿದ್ದು ನನ್ನನು ಯಾವ ಪಾಪಕ್ಕೆ ತಳುವಿರಿ ಎಂದು  ಬಿನ್ನೈಸಿಕೊಂಡನು.

ಮಾದರ ಚೆನ್ನಯ್ಯ ಉತ್ತಮ ವಚನಕಾರನೂ ಆಗಿದ್ದು , ನಿಜಾತ್ಮಾರಾಮ ರಾಮನಾ ಎಂಬ ಅಂಕಿತ ಇಟ್ಟುಕೊಂಡು ವಚನಗಳನ್ನು ಬರೆದಿದ್ದಾನೆ. ಈ ತನಕ ಈತನ 10 ವಚನಗಳು ದೊರಕಿವೆ. ಇವುಗಳಲ್ಲಿ ಶರಣ ಧರ್ಮ  ತತ್ತ್ವಬೋಧನೆ ಕಂಡುಬರುತ್ತದೆ. ಮಲ್ಲಿಕಾರ್ಜುನ ಪಂಡಿತಾರಾಧ್ಯ ಮತ್ತು ಪಾಲ್ಕುರಿಕೆ ಸೋಮನಾಥ ಇವರ ಗಣಸಹಸ್ರನಾಮದಲ್ಲಿ ಇವನ ಹೆಸರಿದೆ. ಅಬ್ಬಲೂರು, ಜಗಳೂರು ಶಿಲಾಶಾಸನಗಳಲ್ಲಿ ಈತನ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಮಾದರ ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. “ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ”, “ಅಪ್ಪನು ನಮ್ಮ ಮಾದಾರ ಚೆನ್ನಯ್ಯ”, “ಚೆನ್ನಯ್ಯನ ಮನೆಯ ದಾಸನ ಮಗನು” ಎಂದು ಚೆನ್ನಯ್ಯನವರನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ 12ನೇ ಶತಮಾನಕ್ಕಿಂತಲೂ ಹಿಂದೆಯೇ ಚೆನ್ನಯ್ಯನವರು ಜೀವಿಸಿದ್ದರು ಎಂದು ತಿಳಿಯುತ್ತದೆ. ಅಲ್ಲದೆ ಚೆನ್ನಯ್ಯನವರು ಬಸವಣ್ಣನವರಿಗಿಂತಲೂ ಹಿರಿಯ ವಚನಕಾರರು ಎಂದು ಈ ಲೇಖನದಲ್ಲಿ ಅರಿತುಕೊಳ್ಳಬಹುದಾಗಿದೆ.
   ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ನಂತರ, ಭಾರತದ ಎಲ್ಲಾ ಭಾಗಗಳಿಂದ ಆಧ್ಯಾತ್ಮ ಮತ್ತು ಸತ್ಯಾನ್ವೇಷಕರು ಸೇರಿದಂತೆ ಪ್ರಬುದ್ಧ ಪುರುಷರು ಮತ್ತು ಮಹಿಳೆಯರ ನಕ್ಷತ್ರಪುಂಜವು ಕಲ್ಯಾಣಕ್ಕೆ ಬಂದಿತು. ಅವರಲ್ಲಿ ಮಾದಾರ ಚೆನ್ನಯ್ಯ ಎಂಬಾತ ತಮಿಳುನಾಡಿನಿಂದ ಬಂದಿದ್ದ ಎನ್ನಲಾಗಿದೆ.

ಮಾದಿಗ ಜಾತಿಗೆ ಸೇರಿದ ಮಾದಾರ ಚೆನ್ನಯ್ಯನವರು ಶಿವನ ಪರಮ ಭಕ್ತರಾಗಿದ್ದರು ಮತ್ತು ಅನುಭವ ಮಂಟಪದಲ್ಲಿ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಜೀವನೋಪಾಯಕ್ಕಾಗಿ ಚಮ್ಮಾರ ಕೆಲಸ ಮಾಡುತ್ತಿದ್ದರು ಮತ್ತು ಶಿವಶರಣರಿಗೆ ಚಪ್ಪಲಿ ಮಾಡುತ್ತಿದ್ದರು. ಬಸವೇಶ್ವರರು ಮಾದಾರ ಚೆನ್ನಯ್ಯನ ಬಗ್ಗೆ ಬಹಳ ಗೌರವವನ್ನು ಹೊಂದಿದ್ದರು ಮತ್ತು ಅವರ ವಚನಗಳಲ್ಲಿ (ಮಾತುಗಳಲ್ಲಿ) ಅವರ ಹೆಸರನ್ನು ಹಲವಾರು ಬಾರಿ ಉಲ್ಲೇಖಿಸಿದ್ದಾರೆ. ಬಸವೇಶ್ವರರು ತಮ್ಮ ಒಂದು ವಚನದಲ್ಲಿ ಮಾದಾರ ಚೆನ್ನಯ್ಯ ಅವರ ಅಜ್ಜ ಎಂದು ಹೇಳಿದರೆ , ಇನ್ನೊಂದರಲ್ಲಿ ಅವರು ತಮ್ಮ ಕಿರಿಯ ಚಿಕ್ಕಪ್ಪ ಮಾದಾರ ಚೆನ್ನಯ್ಯ

 ಅವರನ್ನು ಪ್ರೀತಿಸಿ ಬೆಳೆಸಿದರು ಎಂದು ಹೇಳುತ್ತಾರೆ ಮತ್ತು ಇನ್ನೊಂದು ವಚನದಲ್ಲಿ ಬಸವೇಶ್ವರರು ದಾಸಿಯ ಮಗನ ಸಂಯೋಗದಿಂದ ಜನಿಸಿದರು ಎಂದು ಹೇಳುತ್ತಾರೆ. ಚೆನ್ನಯ್ಯನ ಮನೆಯಲ್ಲಿ ಸೇವಕ

ಮತ್ತು ಕಕ್ಕಯ್ಯ ಮತ್ತು ಕೂಡಲಸಂಗಮ  ಎಂಬುವರ ಮನೆಯಲ್ಲಿದ್ದ ಸೇವಕಿಯ ಮಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.  ಇವರಿಬ್ಬರಿಗೆ ಹುಟ್ಟಿದ ಶಿಶು ನಾನು ಎಂದಿದ್ದಾರೆ ಬಸವಣ್ಣನವರು . ಇದು ಕಕ್ಕಯ್ಯ ಮತ್ತು ಚೆನ್ನಯ್ಯನವರ ಮೇಲೆ ಬಸವಣ್ಣನವರು ಇತ್ತ ಭಕ್ತಿಯ ಬಗ್ಗೆ ಗೊತ್ತಾಗುತ್ತದೆ. ಇದೆಲ್ಲವೂ ಮಾದಾರ ಚೆನ್ನಯ್ಯನವರು ಬಸವೇಶ್ವರರ ಹಿರಿಯ ಸಮಕಾಲೀನರು ಎಂಬುದನ್ನು ತೋರಿಸುತ್ತದೆ.

ಮಾದಾರ ಚೆನ್ನಯ್ಯನವರು ತಮ್ಮ ವಚನಗಳಲ್ಲಿ ಒಬ್ಬರ ಜಾತಿಯನ್ನು ಶ್ರೇಷ್ಠವೆಂದು ಬಿಂಬಿಸುವ ನಿರರ್ಥಕತೆಯ ಬಗ್ಗೆ ಮಾತನಾಡಿದ್ದಾರೆ ಮತ್ತು ಎಲ್ಲಾ ಮಾನವರು ತಮ್ಮ ತಾಯಿಯ ಯೋನಿಯ ಮೂಲಕ ಹುಟ್ಟಿದ್ದಾರೆ ಮತ್ತು ಮಾಂಸ ಮತ್ತು ಮೂಳೆಗಳಿಂದ ಕೂಡಿದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದ ತನ್ನನ್ನು ತಾನು ಶ್ರೇಷ್ಠ ಎಂದು ಹೇಳಿಕೊಳ್ಳುವುದರಲ್ಲಿ ಮತ್ತು ಇನ್ನೊಬ್ಬರನ್ನು ಕೀಳು ಎಂದು ಹೇಳುವುದರಲ್ಲಿ ಯಾವುದೇ ತರ್ಕವಿಲ್ಲ. ಅವನ ಪ್ರಕಾರ ಒಬ್ಬ ವ್ಯಕ್ತಿಯ ವಂಶಾವಳಿಯು ಒಬ್ಬನ ನೀತಿಯ ನಡತೆಯ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಜಾತಿಯ ಮೇಲೆ ಅಲ್ಲ. ಕೇವಲ ಎರಡು ಜಾತಿಗಳಿವೆ; ಮಾನವರು ಆಯ್ಕೆ ಮಾಡಲು ಸದ್ಗುಣ ಅಥವಾ ಅನೈತಿಕ.

ಪ್ರಜ್ವಲಿಸುವ ದೀಪದ ಸಾದೃಶ್ಯವನ್ನು ನೀಡುತ್ತಾ, ಮಾದಾರ ಚೆನ್ನಯ್ಯನು ಎಣ್ಣೆ, ಬತ್ತಿ ಮತ್ತು ಬೆಂಕಿಯ ಸಂಯೋಜನೆಯಾದಾಗ ದೀಪವು ಬೆಳಗುತ್ತದೆ ಎಂದು ಹೇಳುತ್ತಾರೆ; ಅಂತೆಯೇ ಕ್ರಿಯೆ ಮತ್ತು ಜ್ಞಾನದ ಸಂಶ್ಲೇಷಣೆಯ ಮೂಲಕ ಮಾತ್ರ ಒಬ್ಬರು ಸತ್ಯವನ್ನು ಗ್ರಹಿಸಬಹುದು. ವೃತ್ತಿಯಲ್ಲಿ ನಿರತರಾಗಿದ್ದರೂ ಪರಮಾತ್ಮನಲ್ಲಿ ಮಗ್ನರಾಗಬೇಕು ಎನ್ನುತ್ತಾರೆ.

   ಮಾದಾರ ಚೆನ್ನಯನ ವಚನಗಳಲ್ಲಿ `ಕುಲ’ ವಿಭಿನ್ನ ನೆಲೆಯಲ್ಲಿ ಚಿಂತಿಸಿದ್ದಾನೆ. 

ಆಚಾರವೆಕುಲ ಅನಾಚಾರವೆ ಹೊಲೆ
ಆವ ಕುಲವಾದರೂ ಅರಿದಲ್ಲಿಯೆ  ಪರತತ್ವಭಾವಿ
ಮರೆದಲ್ಲಿಯೆ ಮಲಮ ಬಂಧ
 ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ,
 ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದ ನೆಂಬುದನರಿದು  ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ? 
ಎಂಬ ಇವನ ವಿಚಾರಧಾರೆಗಳು ಬಸವಾದಿ ಶರಣರ ಕ್ರಾಂತಿಗೆ ಮೂಲಬೀಜಗಳು.


ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ
ನುಡಿ ಲೇಸು ನಡೆಯಧರ್ಮ
ಅದು ಬಿಡುಗಡೆಯಿಲ್ಲದ ಹೊಲೆ
ಕಳವು ಪಾರದ್ವಾರಗಳಲ್ಲಿ ಹೊಲಬನರಿಯದೆ
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೇ ಕುಲ, ಅನಾಚಾರವೆ ಹೊಲೆ, ಇಂತೀ ಉಭಯವ
ತಿಳಿದರಿಯಬೇಕು ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ

 ನಡೆ ನುಡಿಯ ಸಾಮರಸ್ಯಕ್ಕೆ   ಆದ್ಯತೆ ನೀಡಿದ ಚೆನ್ನಯ್ಯ ಕುಲ ಹೊಲೆ  ಎಂಬುದು ಸೂತಕವಲ್ಲ ಅದು ಮನಸ್ಥಿತಿ ಎಂದಿದ್ದಾನೆ.

 ವೇದ ಶಾಸ್ತ್ರಕ್ಕೆ ಹಾರುವುನಾಗಿ,
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ,
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವುದಕ್ಕೆ ಶೂದ್ರವಾಗಿ,
ಇಂತೀ ಜಾತಿಗೋತ್ರದೊಳಗಾದ
ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ,
ಹೊಲೆ ಹದಿನೆಂಡುಜಾತಿಯೆಂಬ ಕುಲವಿಲ್ಲ,
ಬ್ರಹ್ಮವನರಿದಲ್ಲಿ ಬ್ರಾಹ್ಮಣ.
ಸರ್ವಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ.
ಈ ಉಭಯವನರಿದು ಮರೆಯಲಿಲ್ಲ,
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.

ಜಾತಿ ಶ್ರೇಷ್ಠತೆ ಜೇಷ್ಠತೆಯನ್ನು ಬ್ರಾಹ್ಮಣ್ಯ್ವನ್ನು ಸಂಪೂರ್ಣ ತಿರಸ್ಕರಿಸಿ ಕಾರ್ಯಕ್ಕಾಗಿ ಹುಟ್ಟಿಕೊಂಡದ್ದು ಹೇಗೆ ಕುಲ ಜಾತಿಯಾಗಬಲ್ಲವು ಎಂದು ಹೇಳುತ್ತಾ ಅಂದು ಗಟ್ಟಿಗೊಂಡಿದ್ದ ವರ್ಣ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾನೆ ಮಾದಾರ ಚೆನ್ನಯ್ಯ.

 ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬವ ನೆಟ್ಟು,
ಆಗುಚೇಗೆಯೆಂಬ ದಡಿಗೋಲಿನಲ್ಲಿ
ಅಗಡದ ಎಮ್ಮೆಯ ಚರ್ಮದ ತೆಗೆದು,
ಉಭಯನಾಮವೆಂಬ ನಾರಿನಲ್ಲಿ ತಿತ್ತಿಯನೊಪ್ಪವ ಮಾಡಿ,
ಭಾವವೆಂಬ ತಿಗುಡಿನಲ್ಲಿ ಸರ್ವಸಾರವೆಂಬ ಖಾರದ ನೀರ ಹೊಯಿದು,
ಅಟ್ಟೆಯ ದುರ್ಗುಣ ಕೆಟ್ಟು,
ಮೆಟ್ಟುಡಿಯವರಿಗೆ ಮುಟ್ಟಿಸಬಂದೆ.
ಮೆಟ್ಟುಡಿಯ ತಪ್ಪಲ ಕಾಯದೆ ಮೆಟ್ಟಡಿಯ ಬಟ್ಟೆ ನೋಡಿಕೊಳ್ಳಿ,
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.


ಈ ಮೇಲಿನ ವಚನದಲ್ಲಿ  ಮಾದಾರ ಚೆನ್ನಯ್ಯ ತಾನು ಮಾಡುವ ಚರ್ಮದ ಚಪ್ಪಲಿಯ ಕಾಯಕದ ಬಗ್ಗೆ ಹೇಳುತ್ತಾ ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬವ ನೆಟ್ಟು, ಕಾಯದಲ್ಲಿ ಆಗುಚೆ ಎಂಬ ದಡಿಗೋಲಿನಲ್ಲಿ ಸತ್ತ ಎಮ್ಮೆಯ ಚರ್ಮವನ್ನು ತೆಗೆದು ,ಉಭಯನಾರಿನಲ್ಲಿ ಚರ್ಮವನ್ನು ಹದಮಾಡಿ ಭಾವವೆಂಬ ತಿಗುಡಿನಲ್ಲಿ ಬದುಕಿನ ಸರ್ವಸಾರವೆಂಬ ಖಾರ ಲವಣ ಮಿಶ್ರಿತ ನೀರು ಹೊಯ್ದು ಮನುಷ್ಯನ ದುರ್ಗುಣಗಳನ್ನು  ಚಪ್ಪಲಿನ  ಅಟ್ಟೆಯ ಮಾಡಿ  ,ಅವುಗಳನ್ನು ಮೆಟ್ಟಿಗೆ ಹೊಲೆದು, ನಾನು ಮಾಡಿದ ಮೆಟ್ಟು ಇದು ನಿಮ್ಮ ಕಾಯವನ್ನೇ ಪ್ರತಿನಿಧಿಸುತ್ತದೆ ಒಮ್ಮೆ ನಿಮ್ಮ ಶರೀರ  ಮೆಟ್ಟು ನೋಡಿಕೊಳ್ಳಿ ,ಕೈಯಲ್ಲಿ ಇದ್ದ ಕತ್ತಿ, ಅಡಿ ಗೂಂಟಕ್ಕೆ ಅಳಿಯೆಯಾಗಬೇಡ ,ಕಾಯಕವೆಂಬ ಪ್ರಬಲ ಅಸ್ತ್ರವಿದ್ದಾಗ ಇನ್ನೊಬ್ಬರಿಗೆ ಗುಲಾಮನಾಗಬೇಡ ಎಂದು ವಿವರಿಸಿದ್ದಾರೆ. ತಮ್ಮ ಕಾಯಕದ ಪಾರಿಭಾಷಿಕ ಪದಗಳಲ್ಲಿ ಕಾಯಕದ ಜೊತೆಗೆ ಪಾರಮಾರ್ಥಿಕ ಚಿಂತನೆ ಮಾಡುವ ಅಪರೂಪದ ವಚನಕಾರ ಮಾದಾರ ಚೆನ್ನಯ್ಯ.

ಆಕರಗಳು  

ವಚನ ಸಂಪುಟ
ಶಿವಾನಂದ ಕೆಳಗಿನಮನಿ. (2006). ಮಾದಾರ ಚೆನ್ನಯ್ಯ ಬಹುಮುಖಿ ಅಧ್ಯಯನ. ಸಿ.ವಿ.ಜಿ. ಪಬ್ಲಿಕೇಷನ್. ಬೆಂಗಳೂರು.

ಮೈಲಹಳ್ಳಿ ರೇವಣ್ಣ. (2012). ದಲಿತ ಸಂತರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಶ್ರೀನಿವಾಸಮೂರ್ತಿ ಎಂ. ಆರ್. (2013). ವಚನ ಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಕುಪೇಂದ್ರ ಪಾಟೀಲ. (2016). ಅಪ್ಪನು ನಮ್ಮ ಮಾದಾರ ಚೆನ್ನಯ್ಯ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಮೈಸೂರು.

Leave a Reply

Back To Top