ಮನ್ಸೂರ್ ಮೂಲ್ಕಿ ಅವರ ಕವಿತೆ-ಅಪ್ಪನ ಬೆವರು

ಅಪ್ಪನೆಂದರೆ ಹಾಗೇನೇ ನೋವನು ಉಣ್ಣುವ ಮನುಜಾನು
ದುಡಿತದ ಕಷ್ಟವ ಬದಿಗಿರಿಸಿ ಕಾಂತಿಯ ನೀಡುವ ಸೂರ್ಯನು

ಅಪ್ಪ ನಡೆದ ದಾರಿಗಳು ಸವೆಸವೆದು ಹೊಳಪನು ನೀಡುತಿದೆ
ಅಪ್ಪನ ಬೆವರಿನ ಸಾಗರವು ಸಂಸಾರದ ಹಸಿವನ್ನು ತಣಿಸುತಿದೆ

ಅಭಯವ ನೀಡುವ ಅಪ್ಪನ ಕೈಗಳು ಅನ್ನವ ಕೊಡುವ ಪಾತ್ರೆಯದು
ಭಾರವ ಹೊರುವ ಅಪ್ಪನ ಹೆಗಲು ಮಕ್ಕಳ ಕನಸಿನ ಬಂಡಿಯದು

ಅಪ್ಪನ ಸಹನೆಯೇ ಮಕ್ಕಳ ಸುಖವು ಮಕ್ಕಳ ನಗುವೆ ಅಪ್ಪನಿಗಾನಂದ
ಅಪ್ಪನ ಜೊತೆಯಲಿ ಹರಟೆಯ ಹೊಡೆಯಲು ಅಪ್ಪನಿಗದುವೇ ಮಹದಾನಂದ


Leave a Reply

Back To Top