ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯೂರೋಪಿನ ನೆಲದಲ್ಲಿ ಮರಿ ಹಾಕುವ (ಸಸ್ತನಿ) ಒಂದು ವಿಶಿಷ್ಟ ಜಾತಿಯ ಪ್ರಾಣಿ ಕಂಡುಬರುತ್ತದೆ. ಅದರ ವಿಶೇಷತೆ ಏನು ಎಂದರೆ, ಅದಕ್ಕೆ ನೋಡಲು ತಲೆ ಇಲ್ಲ ಆದರೂ ತಲೆ ಇದ್ದು ಮಾಡಬೇಕಾದ ಜಾಗರೂಕತೆ ಕೆಲಸವನ್ನು ಅದು ನಿರ್ವಹಿಸಿಕೊಂಡು ಬರುತ್ತದೆ.

ಈ ಸಸ್ತನೆಯ ಪ್ರಮುಖ ಆಹಾರವೆಂದರೆ ಎರೆಹುಳುಗಳು. ಮಳೆಗಾಲವಲ್ಲದ ಸಮಯದಲ್ಲಿ ಆಹಾರ ಇಲ್ಲದೆ ಅದು ಬದುಕೀತು ಹೇಗೆಂದು ತಲೆ ಇದ್ದಂತಿರುವ ನಾವು ತಲೆ ಇಲ್ಲವೆನ್ನುವ ಪ್ರಾಣಿಯತ್ತ ತಟ್ಟನೆ ಪ್ರಶ್ನೆ ಒಂದನ್ನು ಎಸೆಯುತ್ತೇವೆ
.
ಕ್ಷಣ ಮಾತ್ರವೂ ಹಿಂದೆ ಮುಂದೆ ವಿಚಾರಿಸದೆ ಹೀಗೆ ಪ್ರಶ್ನೆ ಕೇಳುವ ನಮಗೆ ನಿಜವಾಗಿಯೂ ತಲೆ ಇದೆಯೋ ಎಂದು ಇರುವ ತಲೆಯನ್ನು ಒಮ್ಮೆ ತಟ್ಟಿ ಮುಟ್ಟಿ ನೋಡಿಕೊಂಡು ವಿಚಾರಿಸಬೇಕಾಗುತ್ತದೆ.

ನಮ್ಮದೇನೇ ಇದ್ದರೂ ಆತುರಗಾರನ ಬುದ್ಧಿಯ ತಲೆ .
ಸರಿ,ತಲೆ ಇಲ್ಲದ ವಿಚಿತ್ರ ಪ್ರಾಣಿಯ ತಲೆವಾನ್( ತಲೆ ಇರುವ)) ಕೆಲಸವಾದರೂ ಏನೆಂದು ನೋಡೋಣವೇ?

ಮಳೆಗಾಲದಲ್ಲಿ ಎರೆಹುಳು ಹೆಚ್ಚಿರುವ ಸಮಯದಲ್ಲಿ ಅವುಗಳನ್ನ ತದನಂತರ ತಿನ್ನಲು ಕೂಡಿಡಲು ಉಪಾಯ ಒಂದನ್ನು ಹೂಡುತ್ತದೆ.
ಮಳೆ ಹುಳುಗಳ ತಲೆಗಳನ್ನೆಲ್ಲ ತುಂಡರಿಸಿ ಬಿಡುತ್ತದೆ. ಇದರಿಂದಾಗಿ ಹುಳುಗಳು ಮಣ್ಣಿನಲ್ಲಿ ಹೂತು ಹೋಗಲಾರದೆ ನೆಲದ ಮೇಲೆ ಬಿದ್ದುಕೊಂಡಿರಬೇಕಾಗುತ್ತದೆ. ಹೀಗೆ ಹಲವು ದಿನಗಳ ವರೆಗಾದರೂ ತಿನ್ನಲು ಬರಬಹುದಾದ ಸಂಗ್ರಹಿತ ಆಹಾರದಿಂದ ಅದು ತನ್ನ ಊಟದ ಸಮಸ್ಯೆಯನ್ನು ನೀಗಿಸಿಕೊಳ್ಳುತ್ತದೆ. ಒಂದು ವೇಳೆ ಆಹಾರ ಸಾಕಷ್ಟು ಸಿಕ್ಕಾಗಲಂತೂ ತಾನು ತುಂಡರಿಸಿಟ್ಟ ಎರೆಹುಳುಗಳನ್ನ ಬಹುದಿನಗಳ ವರೆಗೆ ತಿನ್ನಲು ಹೋಗುವುದೇ ಇಲ್ಲ . ಹೀಗಾಗಿ ಕಾಲಾಂತರದಲ್ಲಿ ಎರೆಹುಳುಗಳು ಪುನಃ ಮುಂಡದ ಮೇಲೆ ರುಂಡವನ್ನು ಬೆಳೆಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತವೆ. (ಇದು ತಲೆ ಇದ್ದವರು ತಪ್ಪಿಸಿಕೊಳ್ಳಲು ಮಾಡುವ ಮತ್ತೊಂದು ಜಾಣ ಉಪಾಯ)

ಅತಿ ಬುದ್ಧಿವಂತ ಬೃಹದಾಕಾರದ ಮಸ್ತಿಷ್ಕ (ಮಿದುಳು) ವನ್ನು ಹೊಂದಿದ ತಲೆ ಸಹಿತ ಮಾನವರು ಎಂದಾದರೂ ಇಂತಹ ತಲೆ ರಹಿತ ಪ್ರಾಣಿಯಂತೆ ತಲೆ ಸಹಿತ ಓಡಿಯಾರೇ?
ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಇರುವ ಎರಡು ಪ್ರಮುಖ ವಿಧಾನಗಳಾದ ಆಹಾರದ ಸಂಗ್ರಹಣೆ ಮತ್ತು ಅಪವ್ಯವಲ್ಲದ ಮಿತ ಬಳಕೆ, ಪದ್ಧತಿಗಳನ್ನು ಎಂದಾದರೂ ನಾವು ಪಾಲಿಸಿಕೊಂಡು ಹೋಗುತ್ತಿದ್ದೇವೆಯೇ ?
ತಲೆ ಇದ್ದೂ ಇಲ್ಲದವರಂತೆ ವರ್ತಿಸುತ್ತಿದ್ದೇವಷ್ಟೆ.
ಕ್ಷುದ್ರ ಜೀವಿ ಒಂದಕ್ಕಿರುವ ಕನಿಷ್ಠತಮ ಬುದ್ಧಿಯಾ
ದರೂ ಈ ತಲೆಯೊಳಗೆ ಇಲ್ಲವೆಂದ ಮೇಲೆ ತಲೆಯ ಮುಖವಾಡ ಧರಿಸಿ ಎದುರುಗಿನ ತಲೆ ಇದ್ದವರನ್ನು ಅಲ್ಲಗಳೆಯುವ ಕುಬ್ಜ ಮಾನವನಿಗೆ ತಲೆ ಇಲ್ಲದಂತಿರುವ ತಲೆ ಎಂದಾದರೂ ಬಂದೀತೇ ಶಿವನೇ ಎಂದೆನ್ನಿಸುವುದಿಲ್ಲವೇ


About The Author

Leave a Reply

You cannot copy content of this page

Scroll to Top