ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಕಲ್ಪನೆ
![](https://sangaati.in/wp-content/uploads/2025/02/free-photo-of-artistic-portrait-of-woman-behind-rainy-window.jpeg)
ಮನದಾ ಚೆಲುವೆ
ಮನದೊಳಗೆಯಿರುವೆ
ಎಂದು ಈಚೆ ಬರುವೆ
ಮನಸ್ಸ ಭಾವನೆ ನೀನಾಗಿರುವೆ
ನಿನಗಾಗಿ ನಾನೆಂದಿಗೂ ಇರುವೆ|
ನವಿರಾದ ಪ್ರೀತಿಯಿದು
ಇನಿದಾದ ಒಲವಿದು
ಬಳ್ಳಿಯಂತೆ ಹಬ್ಬಿರುವುದು
ಒಲವಿನ ಮನವಿದು|
ನಗುವಿನಲಿ ಎಲ್ಲ
ಮಾತುಗಳಿವೆಯಲ್ಲ
ಬಯಸುವುದೆಲ್ಲ
ತುಂಬಿಹುದೆಲ್ಲ|
ಕಾವ್ಯವು ಕನಸಿನ ಚಿಲುಮೆ
ಮೂಡಿದೆ ಒಲುಮೆ
ಇದು ಕಲ್ಪನಾ ಜಗವೇ
ಹರಡಿದೆ ಒಲವ ಮಹಿಮೆ|
ಅರಳುವ ಹೂಮನ
ಬಯಸಿದೆ ಈ ಮನ
ಹೊಂಗನಸಿನ ಸುಮನ
ಚಂದವಿದು ಭಾವನಾ|
ಗಾಯತ್ರಿ ಎಸ್ ಕೆ
![](https://sangaati.in/wp-content/uploads/2024/08/gayathrisk-498x1024.jpg)
Very nice mam
Savita