ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು
![](https://sangaati.in/wp-content/uploads/2025/02/free-photo-of-a-girls-looking-gorgeous-and-cute.jpeg)
ಹದಿ ಹರೆಯದಾಗ
ತುಂಬಿದ ಮೈ ಮನಸು
ಆ ಸೋಗಲಾಡಿತನ
ಮಾತುಗಳೇ ಕವನ.
ಶೋಡಷಿಯ ಮನಸು
ಕಳವಳಿಸುತಿದೆ,
ದೃಷ್ಟಿ ಆಕಾಶದಲಿ
ಹೇಳಿದ್ದು ಕೇಳಿಸದೆ.
ದೃಷ್ಟಿಯುದ್ಧ ಮಾಡುತ
ಮಾತಾಡದೆ ನೋಡುತ
ಪರಸ್ಪರ ಹೃದಯ-
-ಕದ್ದ ಕಳ್ಳರಿವರು.
ಉಬ್ಬುಗಲ್ಲದ ಪೋರಿ
ಕನ್ನಡಿಯ ನೋಡುತ,
ಮನಸು ಕದ್ದವನ
ಕಣ್ಣಲ್ಲಿ ಹುಡುಕುತ.
ರಂಗೇರಿದ ಮುಖದ
ನಿನ್ನ ಚಿತ್ರ ಬರೆದೆ,
ನಿನ್ನಷ್ಟೇ ಸರಳವು
ನನ್ನ ಕೈಯ ಕುಂಚವು.
ಮುಂಗುರುಳ ಚೆಲುವೆ
ತನ್ನಲ್ಲೇ ಕಳೆದಳು,
ಕನ್ನಡಿಯ ಒಳಗೆ
ತನ್ನನ್ನೇ ಹುಡುಕೋಳು.
ವ್ಯಾಸ ಜೋಶಿ
![](https://sangaati.in/wp-content/uploads/2023/09/vyasajoshi-832x1024.jpg)