ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ನಿವೇದನೆ..!

ನನ್ನೆದೆಯ ಮೌನಕೆ
ಮಾತಾಗಿ ಬಿಡು.!
ಮನದ ಮಾತುಗಳಿಗೆ
ದನಿಯಾಗಿ ಬಿಡು.!

ಉಸಿರಿನ ಶೃತಿಗೆ
ಸ್ವರವಾಗಿ ಬಿಡು.!
ಹೃದಯದ ತಾಳಕೆ
ನಾದವಾಗಿ ಬಿಡು.!

ಆಂತರ್ಯದ ಪದಕೆ
ಪದ್ಯವಾಗಿ ಬಿಡು.!
ಒಡಲಿನ ಗೀತೆಗೆ
ಸಂಗೀತವಾಗಿ ಬಿಡು.!

ಒಲವಿನ ಭಾವಕೆ
ಜೀವವಾಗಿ ಬಿಡು.!
ಒಳಗಿನ ಗುಡಿಗೆ
ದೈವವಾಗಿ ಬಿಡು.!


Leave a Reply

Back To Top