ರಾಮರಾಜ.ಹೆಚ್ ಬಬ್ಬೂರು ಅವರ ಕವಿತೆ-ಅಪ್ಪ ಅಂದರೆ ಅದ್ಭುತವೊ..!

ಅಪ್ಪ ಅಂದರೆ ಅದ್ಭುತವೊ..!
ಅದ್ಹೆಗೆಳಲಿ ಅವ ಸವಿ ಅಮೃತವೊ,
ಅಂಗೈ ಹಿಡಿದು ಆಡಲು ಹೇಳಿದ,
ಮುಂಗೈ ಹಿಡಿದು ನಡೆಯುತ ಸಾಗಿದ,
ಎಡವದೆ ನಡೆಯುವ ನಡತೆಯ ತೋರಿದ .!
ಅಪ್ಪ ಎಂದರೆ ಅದ್ಭುತವೊ..!

ಅಮ್ಮನ ಪಾಲಿನ ದೇವರು ತಾನು,
ನನ್ನಯ ಸಂಗಡ ಸ್ನೇಹಿತನು.
ಕೋಲನು ಹಿಡಿದು, ಗಧರಿಸಿ ಕರೆದು
ಗಮ್ಯದ ಕಡೆ ಕೈ ತೋರಿದನು.
ಅಪ್ಪ ಎಂದರೆ ಅದ್ಭುತವೋ.!

ಅಮ್ಮನು ಮಾಡಿದ ಅಡುಗೆಯ ರುಚಿಗೆ,
ಅಪ್ಪನ ಶ್ರಮವು ಕರಗಿಹುದು.
ನಾನುಡುವ ನಲ್ಮೆಯ ತೊದಲಿನ ನುಡಿಗೆ,
ಅಪ್ಪನ ಮುಖದಿ ನಗೆ ಚಿಮ್ಮುವುದು.
ಅವ ಅಪ್ಪ ಎಂದರೆ ಅದ್ಭುತವೊ.!
ತಪ್ಪ ತಿದ್ದಿದ ಸರಿ ಸಾಗರವು.!

ಹೆಗಲಿಗೆ ಏರಿಸಿ, ಚುಕ್ಕಿಯ ತೋರಿಸಿ
ಎಣಿಸೆಂದವನು ಮಿನುಗುವ ತಾರೆಗಳ.
ಕಥೆಗಳ ಹೇಳುತ, ವ್ಯಥೆಗಳ ನುಂಗುತ,
ತಟ್ಟುತ ಮಲಗಿಸಿ ತನ್ನೆದೆಯೊಳು ಚಂದಿರನೂರಿಗೆ ಕರೆದೊಯ್ದು.!
ಅಪ್ಪ ಎಂದರೆ ಅದ್ಭುತವೊ…!
ತಪ್ಪು ತಿದ್ದುವ ಸರಿ ಸಾಗರವೊ.


2 thoughts on “ರಾಮರಾಜ.ಹೆಚ್ ಬಬ್ಬೂರು ಅವರ ಕವಿತೆ-ಅಪ್ಪ ಅಂದರೆ ಅದ್ಭುತವೊ..!

Leave a Reply

Back To Top