ಅಮೇಧ್ಯದ ಮಡಿಕೆ ಮೂತ್ರದ ಕುಡಿಕೆ
ಎಲುಬಿನ ತಡಿಕೆ ಕೀವಿನ ಹಡಿಕೆ
ಸುಡಲೀ ದೇಹವ : ಒಡಲು ವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ

ಮಾನವನ ಶರೀರವು ಅಶಾಶ್ವತವಾದುದು. ಈ ಅಶಾಶ್ವತವಾದ ಶರೀರ ಸುಖವನ್ನು ಮೆಚ್ಚಿ, ಅದರಲ್ಲೇ ಮೈ ಮರೆತು ಅಜ್ಞಾನದಿಂದ ಮೆರೆವ ಮಾನವರಿಗೆ, ಒಂದು ಉತ್ತಮ ಸಂದೇಶವನ್ನು ಅಕ್ಕನವರ ಈ ಒಂದು ವಚನದಲ್ಲಿ ಕಾಣಬಹುದು .

ಅಮೇಧ್ಯದ ಮಡಿಕೆ

ಮೂತ್ರದ ಕುಡಿಕೆಮಣ್ಣಿನ ಮಡಿಕೆ

ಶರೀರ ಒಂದು ಮಣ್ಣಿನ ಮಡಕೆ ಇದ್ದ ಹಾಗೆ .
ಹದವಾದ ಹದಮಣ್ಣು ಮಡಿಕೆ ಮಾಡಲು ಬೇಕು .ಹಾಗೇ ಅಧ್ಯಾತ್ಮ
ಈ ಅಧ್ಯಾತ್ಮ ಎನ್ನುವ ಆಚಾರ ವಿಚಾರ ಸಂಸ್ಕಾರ ಎನ್ನುವ ಮಣ್ಣ ಕಣಗಳ ರಾಶಿಯನ್ನು ಹದವಾಗಿ ತುಳಿಯಬೇಕು .
ಅಂದರೆ ನಮ್ಮ ಒಳಗಿನ ಅರಿಷಡ್ವರ್ಗಗಳನ್ನು ಗೆದ್ದು ಹದವಾಗಿ ತುಳಿದು ಮೆಟ್ಟಿ ನಡೆಯಬೇಕು . ಗಾಳಿ ,ಚಳಿ ,ಮಳೆಗೆ ಈ ತನು ವಗ್ಗಿಕೊಂಡು.ಬಿಸಿಲಿನ ತಾಪಕ್ಕೂ ಅಂಜದೇ ಅಳುಕದೇ ಗಟ್ಟಿಗೊಳಿಸಿಕೊಳ್ಳಬೇಕು.
ಕುಂಬಾರನ ಗಡಿಗೆ ಬೆಂಕಿಗೆ ಸುಟ್ಟಾಗಲಲ್ಲವೇ? ತಾಳಿಕೆ ಬರುವುದು! ಹಾಗೇ ಈ ತನುವೆಂಬ ಮಡಿಕೆ ತಾಳಿಕೆ ಬರುವುದು.

ಇದು ಒಂದು ಅಮೇಧ್ಯದ ಅಂದರೆ ಕರುಳಿನಲ್ಲಿ ಜೀರ್ಣಿಸಲಾಗದ, ಬ್ಯಾಕ್ಟೀರಿಯಾದಿಂದ ದೊಡ್ಡ ಕರುಳಿನಲ್ಲಿ ಕೊಳೆಸಲಾದ ಆಹಾರದ ಗಣವೇ ಮಡಿಕೆಯ ಮಣ್ಣುಇದ್ದ ಹಾಗೆ .

ಚಯಾಪಚಯ ತ್ಯಾಜ್ಯ ಉತ್ಪನ್ನಗಳು ಸತ್ತ ಒಳಪದರಿನ ಜೀವಕೋಶಗಳನ್ನು ಹೊಂದಿದ ಅಮೇಧ್ಯದ ಮಡಿಕೆಯೇ ಈ ತನು .
ಪಂಚಜ್ಞಾನೇಂದ್ರೀಯ ಹಾಗೂ ಪಂಚ ಕರ್ಮೇಂದ್ರೀಯಗಳ ಸುಖದಲ್ಲೇ, ಬಿದ್ದು ಮೈ ಮರೆತು ಹುಚ್ಚಿಯ ಮಚ್ಚೆಯಲ್ಲಿ ವದ್ದಾಡುವ. ಮೂತ್ರದ ಕುಡಿಕೆಯನ್ನು ಹೊತ್ತು ತಿರುಗುವ ಈ ಕಾಯದ ಸುಖದಲ್ಲೇ ಮೈ ಮರೆತು ತನ್ನವರನ್ನೆಲ್ಲ ದೂಷಿಸುವ ದುರುಳ ಮಾನವನ ನಡೆಗೆ ಏನನ್ನಬೇಕೋ.

ಪಂಚ ಜ್ಞಾನೇಂದ್ರೀಯ ಪಂಚ ಕರ್ಮೇಂದ್ರೀಯಗಳಿಂದ ಕೂಡಿದ ಈ ಶರೀರದ ತುಂಬೆಲ್ಲ ಬರೀ ಕಶ್ಮಲದ ವೈರ ಭಾವದ ಕೊಳೆಯೇ ತುಂಬಿದೆ .
ಈ ಶರೀರದಿಂದಲೇ ನಾವು ಆದರೆ ನಾವೇ ಶರೀರವಲ್ಲ. ಈ ಶರೀರದ ಅನಂತವೇ ಚೆನ್ನಮಲ್ಲಿಕಾರ್ಜುನ. ಎನ್ನುವರು ಅಕ್ಕ.
ಮಾಂಸ ,ರಕ್ತ ಹಾಗೂ ಅಸ್ಥಿಗಳೊಳಗೆ ತುಂಬಿದ ಮೂತ್ರದ ಚೀಲ . ಮೂತ್ರ ಹಾಗೂ ಕಕ್ಕಸ್ಸಿನಿಂದ ತುಂಬಿದ ಒಂದು ಕುಡಿಕೆಯಂತೆ ಈ ಶರೀರ.
ಯಾವಾಗ ಈ ಮಡಿಕೆ ಒಡೆದು ಗಬ್ಬೆದ್ದು ನಾರುವುದೋ ಯಾರು ಬಲ್ಲವರಿಲ್ಲವಾದರೂ, ನನ್ನ ಚೆನ್ನಮಲ್ಲಿಕಾರ್ಜುನನೊಬ್ಬನೇ ಬಲ್ಲಿದನು .ಹೀಗಾಗಿ ಬಲ್ಲಿದನಾದ ಪರಮಾತ್ಮನ ನಾಮಸ್ಮರಣೆಯಲ್ಲಿ
ಈ ಅಮೇಧ್ಯದ ಮಡಿಕೆ ಮೂತ್ರದ ಕುಡಿಕೆಯನ್ನು ಉಳಿಸಿಕೊಂಡು ಧ್ಯಾನಾಸಕ್ತನಾಗುವ ಪರಿಯನ್ನು ಕಂಡುಕೊಂಡು ಸಾಗೋಣ ಎನ್ನುವ ಅರಿವನ್ನು ಕಂಡುಕೊಳ್ಳೋಣ.

ಎಲುಬಿನ ತಡಿಕೆ ಕೀವಿನ ಹಡಿಕೆ

ಈ ದೇಹ ಎಲುಬುಗಳ ತಡಿಕೆಯಾಗಿದೆ. ಈ ಎಲುಬುಗಳಿಗೆ ಎನಾದರೂ ಗಾಯವಾದರೆ ಕೀವಾಗಿ ಸೋರುವುದು.
ಈ ದೇಹದ ತುಂಬ ತುಂಬಿಕೊಂಡ ಕೀವು ಅದರ ದುರ್ವಾಸನೆಯ ನಂಜು .ಈ ಶರೀರದ ಮೇಲೆ ಆಸೆಯಿಟ್ಟು ಮೆರೆಯುವ ಜನ ಚೆನ್ನಮಲ್ಲಿಕಾರ್ಜುನನನ್ನು ಮರೆತು ತಿರುಗುತ್ತಿರುವ ಜನರಿಗೆ ಒಂದು ಅಧ್ಯಾತ್ಮ ಹಾಗೂ ವೈಜ್ಞಾನಿಕ ಜೀವನದ ಸಂದೇಶವನ್ನು ಅರಿವಿನ ಮುಖಾಂತರ ತಿಳಿಯಪಡಿಸಿದ್ದಾರೆ.
ನಾವಾರೂ ಚೆನ್ನಮಲ್ಲಿಕಾರ್ಜುನನಾಗಲು ಸಾಧ್ಯವಿಲ್ಲ. ಏಕೆಂದರೆ ಈ ಶರೀರ ಎನ್ನುವ ಸುಖದಲ್ಲೇ ಮಗ್ನರಾಗಿದ್ದೇವೆ .ಅದರ ಚೆಲುವ ಸೊಗದಲ್ಲೇ ಮೈಮರೆತಿರುವ ನಾವು ಕ್ಷಣವಾದರೂ ಆ ದಿವ್ಯ ಪರಮಾತ್ಮ ಸ್ವರೂಪನನನ್ನು ನೆನೆದು ಖುಷಿ ಪಡಲಾರೆವು .ನಾನು ನನ್ನದು ಎನ್ನುವ ಬಿರುಕು ಭಾವ ಭಾವನೆಗಳಲ್ಲೇ ಹೊರಳಾಡುವ ಬುದ್ಧಿಗೇಡಿಗಳಾಗಿದ್ದೇವೆ .

ಸುಡಲೀ ದೇಹವ : ಒಡಲು ಹಿಡಿದು ಕೆಡದಿರು ಚೆನ್ನಮಲ್ಲಿಕಾರ್ಜುನನರಿಯದ ಮರುಳೆ

ಈ ಶರೀರದ ಮೇಲಿನ ಒಲವನ್ನು ಈ ಕ್ಷಣವೇ ಸುಟ್ಟು ಬಿಡು .ಈ ಒಡಲಿನ ಸುಖದಲ್ಲೇ ಮೈ ಮರೆತು ಸಾಗಬೇಡ .ಹೀಗೆ ಒಡಲಿನ ಹಿಂದೆ ಸಾಗಿ ಕೆಡದಿರು .
ಪಂಚ ಜ್ಞಾನೇಂದ್ರೀಯ ಪಂಚ ಕರ್ಮೇಂದ್ರೀಯಗಳನ್ನು ನಿನ್ನ ಅಧೀನದಲ್ಲಿ ಇಟ್ಟುಕೊಂಡು ,ಶ್ರೇಷ್ಠತೆಯನ್ನು ಮೆರೆ .ಸಾಧಿಸು ಪರಮಾತ್ಮನ ಸೇವೆಯಲ್ಲಿ ಸಮಯ ಕಳೆ .ಲೀನವಾಗು ಲಿಂಗ ಜ್ಞಾನದಲ್ಲಿ .ಐಕ್ಯವಾಗು ಲಿಂಗದಲ್ಲೇ
ಅರಿವಿರಲಿ ಅಂತರಾತ್ಮದಲಿ ನಡೆಯಬೇಡ. ನುಡಿಯಬೇಡ ,ನುಡಿದು ತಪ್ಪುಲೂಬೇಡ .ಇರಲಿ ದಿವ್ಯ ಜ್ಞಾನ. ಆ ಪರಮಾತ್ಮ ಸ್ವರೂಪ ಚೆನ್ನಮಲ್ಲಿಕಾರ್ಜುನನ ನಾಮಸ್ಮರಣೆಯಲಿ ದಿನ ದೂಡು .ಸಾರ್ಥಕವಾದಿತು ನಿನ್ನ ತನು .ಮಣ್ಣಲ್ಲಿ ಮಣ್ಣಾಗುವ ಈ ತನುವಿನ ಮೋಹದಿಂದ. ಕೋಪಿಸಲೂ ಬೇಡ .ಎದುರು ಉತ್ತರಿಸಲೂ ಬೇಡ .
ಬದುಕು ಸಾಗರ ನಡೆ ಪಯಣ ಸಾಗಲಿ ದೂರ ವಿಶ್ರಾಂತ ವಿರಾಮ. ಸಿಗಲಿ ಶಾಂತಿ .ಮನಕ್ಕೆ ಹಾಗೂ ಮನಸ್ಸಿಗೆ .ಎನ್ನುವರು ಅಕ್ಕ.

ಒಟ್ಟಿನಲ್ಲಿ ಮನುಷ್ಯ ತಾನು ತನ್ನ ಸುತ್ತಲಿನ ಜೀವ ಜಾಲದ ಚೈತನ್ಯವನ್ನು ಚೀತ್ಕಳೆಯನ್ನು ನಿರಾಕಾರದ ಶಿವನ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಮತ್ತೆ ನಿರಾಕಾರದ ನಿರುಪಾಧಿಕ ತತ್ವದ ಅಧ್ಯಾತ್ಮಿಕ ಪಯಣಕ್ಕೆ ಕರೆದೊಯ್ಯುವುದೇ ಶರಣ ಮಾರ್ಗ ತನ್ನಲ್ಲಿಯೇ ದೈವತ್ವವನ್ನು ಅಥವಾತಾನೇಲಿಂಗಸ್ವರೂಪಿಯಾಗಬೇಕೆನ್ನುವುದು ಶರಣರ ಪರಿಕಲ್ಪನೆ.
ಮೂತ್ರದ ಕುಡಿಕೆಯಾದ ಈ ಶರೀರ ಅನಾತ್ಮವಸ್ತುವಿನಲ್ಲಿ ನಾನು ಎನ್ನುವ ಅಹಂಕಾರ ,ಈ ಅಸತ್ಯವಾದ ಶರೀರವನ್ನು ಸತ್ಯವೆಂದು ಭಾವಿಸಿಕೊಂಡು ಅದು ತಾನೇ ಎಂಬ ಬುದ್ಧಿಯಿಂದ ತನ್ನ ಸುತ್ತಲೂ ವಿಷಯಗಳಿಂದ ಪೋಷಿಸುತ್ತದೆ .
ಪಂಚಕರ್ಮೇಂದ್ರಿಯಗಳೊಂದಿಗೆ ಕೂಡಿರುವ ಈ ಪ್ರಾಣವು ಪ್ರಾಣಮಯ ಕೋಶವಾಗಿರುತ್ತದೆ. ಅನ್ನಮಯ ಕೋಶವು ಈ ಪ್ರಾಣಮಯದಿಂದ ತುಂಬಲ್ಪಟ್ಟು ಆತ್ಮವಂತವಾಗಿ ಎಲ್ಲಾ ಕ್ರಿಯೆಗಳಲ್ಲಿಯೂ ಪ್ರವರ್ತಿಸುತ್ತದೆ.
ಈ ಪ್ರಾಣಮಯ ಕೋಶವು ವಾಯುವಿನ ರೂಪಾಂತರವಾಗಿರುವುದರಿಂದ ಆತ್ಮವಲ್ಲ. ಒಳಕ್ಕೆ ಹೊರಕ್ಕೆ ವಾಯುವಿನಂತೆ ಬರುತ್ತಲೂ ಇರುತ್ತದೆ .ಇದು ಅನಿಷ್ಟವನ್ನಾಗಲೀ ಇಷ್ಟವನ್ನಾಗಲೀ ಎಲ್ಲಿಯೂ ಅರಿತುಕೊಳ್ಳಲಾರದು. ಮತ್ತೊಂದನನ್ನಾಗಲಿ ತನ್ನನ್ನಾಗಲಿ ಸ್ವಲ್ಪವೂ ಅರಿಯಲಾರದು .ಯಾವಾಗಲೂ ಪರಾಧೀನವಾಗಿರುತ್ತದೆ.
ಅಂತರಂಗದಲ್ಲಿನ ಜೀವ, ಪ್ರಾಣ, ಆತ್ಮವನ್ನು ಮಲತ್ರಯಗಳಿಂದ ದೂರವಿರಿಸಿ, ಶಿವಜ್ಞಾನ ಶಿವ ಚಿಂತನೆಗಳಿಂದ ಶುದ್ಧಿಗೊಳಿಸುವುದನ್ನು ಆತ್ಮದ ಶುದ್ಧೀಕರಣ ಎನ್ನಬಹುದು .ಇದರಿಂದ ಮನಸ್ಸು ಹಾಗೂ ಭಾವನೆಗಳು ಶುದ್ಧಿಯಾಗುತ್ತದೆ .ಬಹಿರಂಗದ ಶುದ್ಧಿಯಿಂದ ತನು ಹಾಗೂ ಕರಣಂಗಳು ಶುದ್ಧಿಗೊಳಿಸುವುದರ ಮೂಲಕ ಶರಣರು ಒಳಗೂ ಹಾಗೂ ಹೊರಗೂ ಸರ್ವಾಂಗ ಲಿಂಗಿಯಾಗಿ ಸರ್ವ ಶುಚಿಯ ಶುದ್ಧಾತ್ಮರಾಗುವ ಅರಿವು.

————————————————————

Leave a Reply

Back To Top