ಎಚ್.ಗೋಪಾಲಕೃಷ್ಣ ಅವರ ಕವಿತೆ-ಆಪ್ತನೊಬ್ಬ ಕನಸಾಗಿ ಹೋದ ……

ಅಗಲಿ ಹೋದ ಆಪ್ತ…..
ಮನಸು ಖಾಲಿ ಖಾಲಿ
ಇನ್ನೊಮ್ಮೆ ಕಾಣಲಾರೆ ಗೆಳೆಯನ
ಇಷ್ಟು ದೀರ್ಘಕಾಲ
ಮಾತಿಗೆ ಸಿಕ್ಕವ
ಜತೆಜತೆಯಲ್ಲಿ
ಸುಖ ಉಂಡವ
ದುಃಖ ನುಂಗಿದವ
ಕೊಸರಿಲ್ಲದೆ ಎಲ್ಲವನು
ಹಂಚಿಕೊಂಡವ
ನೋವು ಒತ್ತರಿಸಿದಾಗ
ಕಣ್ಣೀರು ಒರೆಸಿ
ದುಃಖ ಇಂಗಿಸಿದವ
ಸಂಜೆ ವಾಕಿಂಗ್
ಸಿಕ್ಕಾವ ಬೆಳಿಗ್ಗೆ
ಜಾಗಿಂಗ್ ಜತೆಯಾದವ
ಮಧ್ಯಾಹ್ನ ಲಂಚಿಗೆ
ರಾತ್ರಿ ಡಿನ್ನ ರಿಗೆ
ಆಗಾಗ್ಗೆ ಬುಡ್ಡಿಗೂ
ಕಾಫಿಗೆ ಪಾಲುದಾರ
ಬಾಟಲಿಗೆ ವಾರಸುದಾರ
ನನ್ನ ಕಷ್ಟಕೆ ನೋಂದಾoವ,
ಸುಖಕೆ ಸಂತೋಷ ಪಟ್ಟಾoವ
ಖುಷಿ ಪಟ್ಟು
ನಗಿಸಿದಾoವ
ಜೇಬಿನಿಂದ ಕಂತೆ ಕಂತೆ
ರೊಕ್ಕ ತೆಗೆದು
ತಗೋ ಕಷ್ಟಕಿರಲಿ
ಎಂದಾoವ
ಎಲ್ಲಿ ಮರೆಯಾದೆ
ಎಲ್ಲಿ ಅಡಗಿದೆ
ಎಲ್ಲಿ ಮಾಯವಾದೆ
ಎಲ್ಲಿ ಗಾಳಿಯಾದೆ
ಎಲ್ಲಿ ಆಕಾಶವಾದೆ
ಎಲ್ಲಿ ಯಾವ ಭೂಗರ್ಭ ಹೊಕ್ಕೆ
ಎಲ್ಲಿ ಹುಡುಕಲಿ ನಿನ್ನ
ಯಾವ ಭೂತ ಪಂಚಭೂತ
ನುಂಗಿ ನೀರು ಕುಡಿಯಿತೋ
ಎಲ್ಲಿ ತಡವಲಿ ನಿನ್ನ ….
ಎಲ್ಲೆಲ್ಲಿ ಹುಡುಕಲಿ ನಿನ್ನ

ಹೇಗೆ ತಾನೇ ಮರೆಯಾಲಿ
ಹುಟ್ಟು ಗೆಳೆಯಾನ….


3 thoughts on “ಎಚ್.ಗೋಪಾಲಕೃಷ್ಣ ಅವರ ಕವಿತೆ-ಆಪ್ತನೊಬ್ಬ ಕನಸಾಗಿ ಹೋದ ……

  1. Fantastic this is what felt when I lost Jayadeva he was my my mentor guide philosopher he was always with me he is always with me even today

    1. ದೀರ್ಘಕಾಲದ ಗೆಳೆಯ ಬರೇ ಗೆಳೆಯ ನಾಗಿರುವುದಿಲ್ಲ. ಆತ ನಮ್ಮ ಒಂದು ಭಾಗವೇ ಆಗಿರುತ್ತಾನೆ. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು

Leave a Reply

Back To Top