ರಶ್ಮಿ. ಡಿ ಜೆ ಅವರ ಕವಿತೆ-ಅಮ್ಮ

ಅಮ್ಮನೆಂಬ ಮಾತಿಗೆ ಅರ್ಥ ನೀಡಲು ಸಾಧ್ಯವಿಲ್ಲ
ಅವಳ ಕಣ್ಣಿನ ಪ್ರತಿಬಿಂಬವೇ ಜೀವನ ಬೆಲ್ಲ
ಅಮ್ಮನ ನಗುವೆ ದೀಪದ ಬೆಳಕು
ಅದರ ಕಾಂತಿ ನಾನಾಗಬೇಕು

ಅಮ್ಮನ ಬಳೆಯ ನಾದ ಚೆಂದ
ಅವಳ ಕೈ ತುತ್ತು ಅಮೃತದ ಬಂಧ
ಅಮ್ಮನಿಗೆ ಸೋಲೇ ಇಲ್ಲ
ನನಗೆ ಅವಳೇ ಎಲ್ಲಾ

ಅಮ್ಮನಂತ ಸುಂದರಿಯಿಲ್ಲ
ಅವಳಿಗಿಂತ ಮಂದಿರವಿಲ್ಲ
ನನ್ನ ಆಯಸ್ಸು ನಿನಗೆ ಸೇರಲಿ
ಅಮ್ಮನ ಬದುಕು ಸದಾ ಬೆಳದಿಂಗಳಾಗಲಿ

ಅಮ್ಮನೇ ನನಗೆ ಅಕ್ಷರ
ನನ್ನ ಬದುಕಿಗೆ ಅವಳೇ ತಣ್ಣನೆಯ ಚಂದಿರ
ಅಮ್ಮನ ಬಗ್ಗೆ ಹೆಚ್ಚಿನ ಪದವಿಲ್ಲ
ಅವಳಿರುವಾಗ ನನಗೆ ಸಾವೇ ಇಲ್ಲ

ಮಲ್ಲಿಗೆಯಷ್ಟೇ ಮೃದುವಿನ ಮನಸ್ಸು ನೀನು
ನಿನ್ನ ಕರುಣೆಯ ಮಗಳು ನಾನು
ಹೆತ್ತು ಹೊತ್ತ ತಾಯಿ ನೀನು
ನನ್ನ ಬದುಕಿನ ಪ್ರೀತಿಯ ಮುಗಿಲು ನೀನು


ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಕವಿತೆ ಕಳಿಸಿದವರು ಶಿಕ್ಷಕರಾದ ಸುನೀಲ್‌ ನಾಗೊಂಡನಹಳ್ಳಿ

Leave a Reply

Back To Top