ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅರ್ಧ ಕನಸು
ನಿನ್ನ ಅರ್ಧ ಕನಸು
ನನ್ನ ಅರ್ಧ ಕನವರಿಕೆ
ಕೂಡಿ ಕೊಂಡವು
ಸುಂದರ ನನಸು
ಸ್ನೇಹ ಪ್ರೀತಿ ಒಲವು
ಬೆಸುಗೆ ಹಾಕಿದ ಮನಸ್ಸು
ಅದೆಷ್ಟೋ ದೂರದ ದಾರಿ
ಸವೆಸಿದ್ದು ಗೊತ್ತಾಗಲಿಲ್ಲ
ನಿನಗೆ ನಾನು
ನನಗೆ ನೀನು
ಭಾವ ಭದ್ರತೆಯ
ಚಿಗುರು ಸೊಗಸು
ಇದೆ ಬಾಳ ಬಟ್ಟೆಯ
ಗಟ್ಟಿ ಗುರಿ
ಚೆಲುವ ಕನಸು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕನಸು -ಕನವರಿಕೆಗಳ ಸಮಾಗಮದ ಕವನ
ಸುಂದರವಾಗಿ ಹೊರಹೊಮ್ಮಿದೆ
ಸುತೇಜ