ಕಾವ್ಯ ಸಂಗಾತಿ
ಉಸ್ತಾದ್ ಝಾಕೀರ್ ಹುಸ್ಸೇನ್
ಚಂದಕಚರ್ಲ ರಮೇಶ ಬಾಬು.


ಮೃದು ಬೆರಳುಗಳಲ್ಲಿ ಶುರುವಾದ
ಮಂಜುಲ ತಬಲಾ ನಾದ
ಏರುತ್ತ ಏರುತ್ತ ತಾರಕಕ್ಕೇರಿ
ಧ್ರುವತಾರೆಯಾಗಿ ನಭಕ್ಕೇರಿತು
ಕೀರ್ತಿ ಶಿಖರಗಳ ಮೆಟ್ಟಿಲ ಮೇಲೆ
ಪಾದವಿರಿಸಿದ ಪುಟ್ಟ ಪಾದ
ಒಂದೊಂದಾಗಿ ಸೋಪಾನವೇರುತ
ಪಂಚಭೂತಗಳಲಿ ಲೀನವಾಯಿತು
ತಂದೆ ಕಿವಿಯಲ್ಲೂದಿದ ಸಂಗೀತ ಮಂತ್ರ
ಮುಂದುವರೆಸಿತವರ ಕಲಾ ತಂತ್ರ
ಒಂದು ಹೆಜ್ಜೆ ಹೆಚ್ಚೇ ಎನಿಸುತ
ಹೆಜ್ಜೆಯ ಮೇಲೆ ಹೆಜ್ಹೆ ಹಾಕುತ ಮರೆಯಾಯಿತು
ಇನ್ನುಳಿದಿದ್ದೊಂದೇ ರಸಿಕರಿಗೆ
ಅವರ ತಬಲಾ ಕೇಳಿದ ಕಲಾ ಪ್ರಿಯರಿಗೆ
ಮನದಲ್ಲಿ ಗುಯ್ಗುಡುತ್ತಿರುವ ಬೆರಳುಗಳ ಮೋಡಿ
ವಾಹ್ ತಾಜ್ ಎಂದಿದ್ದ ಅವರ ನುಡಿ
ಚಂದಕಚರ್ಲ ರಮೇ ಶ ಬಾಬು.
